ಹಾವೇರಿ: ಜಿಲ್ಲೆಯಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ತಯಾರಿ ನಡೆಸಿದ್ದಾರೆ. ಜಿಲ್ಲೆಯಾದ್ಯಂತ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿ ಮಂಗಳವಾರ ಜೋರಾಗಿತ್ತು.
ನವರಾತ್ರಿ ಹಾಗೂ ನಾಡಹಬ್ಬ ದಸರಾ ಆಚರಣೆಯ ರಂಗು ಹೆಚ್ಚಾಗಿದೆ. ಬುಧವಾರ ಎಲ್ಲೆಡೆಯೂ ಆಯುಧ ಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಮನೆಯಲ್ಲಿರುವ ಆಯುಧ ಹಾಗೂ ಇತರೆ ವ್ಯವಹಾರದ ವಸ್ತುಗಳಿಗೆ ಪೂಜೆ ಸಲ್ಲಿಸಲಿದ್ದಾರೆ.
ಆಯುಧ ಪೂಜೆಯ ಮುನ್ನಾದಿನವಾದ ಮಂಗಳವಾರ ಮಾರುಕಟ್ಟೆಗಳಲ್ಲಿ ಜನರ ಖರೀದಿ ಜೋರಾಗಿತ್ತು. ಹಾವೇರಿಯ ಎಂ.ಜಿ.ರಸ್ತೆ, ಲಾಲ್‌ಬಹದ್ದೂರ್ ಶಾಸ್ತ್ರ ಮಾರುಕಟ್ಟೆ, ಗಾಂಧಿ ಚೌಕ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಜನಸಂದಣಿ ಕಂಡುಬಂತು. ಪೂಜೆಗೆ ಅಗತ್ಯವಿರುವ ಬಾಳೆದಿಂಡು, ತೋರಣ, ಹೂವು–ಹಣ್ಣುಗಳನ್ನು ಜನರು ಖರೀದಿಸಿದರು.
ಗುರುವಾರ ವಿಜಯದಶಮಿ ಹಬ್ಬವಿದ್ದು, ಅದಕ್ಕೆ ಅಗತ್ಯವಿರುವ ಕಿರಾಣಿ ಹಾಗೂ ಇತರೆ ವಸ್ತುಗಳನ್ನು ಜನರು ಖರೀದಿಸಿದರು.
ಹಾವೇರಿಯ ಮಾರುಕಟ್ಟೆಯಲ್ಲಿ ಆಯುಧ ಪೂಜೆ ಮುನ್ನಾದಿನವಾದ ಮಂಗಳವಾರ ಜನರು ಪೂಜೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿದರು
ಜಿಲ್ಲಾ ಕೇಂದ್ರ ಹಾವೇರಿ ಮಾತ್ರವಲ್ಲದೇ, ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಮಾರುಕಟ್ಟೆಗಳಲ್ಲಿಯೂ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು.
ಹಾವೇರಿಯ ಮಾರುಕಟ್ಟೆಯಲ್ಲಿ ಆಯುಧ ಪೂಜೆ ಮುನ್ನಾದಿನವಾದ ಮಂಗಳವಾರ ಜನರು ಪೂಜೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿದರು
ಜನರು, ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಹಬ್ಬದ ನಿಮಿತ್ತ ಹೂವು, ಹಣ್ಣು, ತರಕಾರಿ ಹಾಗೂ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಬ್ಬ ಆಚರಿಸುವುದಕ್ಕಾಗಿ ಜನರು ಬೆಲೆ ಏರಿಕೆಯಾದರೂ ಅಗತ್ಯ ವಸ್ತುಗಳನ್ನು ಖರೀದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.