
ತಡಸ: ಹತ್ತಿರದ ದುಂಡಶಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ರೈತರ ಸಮುದಾಯ ಭವನಕ್ಕೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ ಹುಣಶ್ಯಾಳ, ‘ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ₹ 5 ಲಕ್ಷ ಅನುದಾನ ನೀಡಿದ್ದಾರೆ. ಭೂಮಿ ಪೂಜೆಯೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರ ಸಮುದಾಯ ಭವನ ನಿರ್ಮಾಣ ಆರಂಭವಾಗಿದೆ’ ಎಂದರು.
‘ಗ್ರಾಮದಲ್ಲಿ ರೈತರ ಸಭೆ, ತರಬೇತಿ ಕಾರ್ಯಕ್ರಮಗಳು, ಸಹಕಾರ ಸಂಘದ ಕಾರ್ಯಾಚರಣೆಗಳು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಸಭಾಭವನ ನಿರ್ಮಾಣಗೊಳ್ಳಲಿದೆ. ಈ ಯೋಜನೆಯು ಗ್ರಾಮೀಣ ಪ್ರದೇಶದ ಕೃಷಿಕರಿಗೆ ಸಹಕಾರ ಸಂಘದ ಮೂಲಕ ಅಭಿವೃದ್ಧಿ ಚಟುವಟಿಕೆಗಳನ್ನು ವಿಸ್ತರಿಸಲು ಪ್ರಮುಖ ವೇದಿಕೆಯಾಗಲಿದೆ’ ಎಂದರು.
ಭಾರತೀಯ ಜನತಾ ಪಕ್ಷದ ಶಿಗ್ಗಾವಿ ಮಂಡಲದ ಅಧ್ಯಕ್ಷ ವಿಶ್ವನಾಥ ಹರವಿ, ಹಾಲು ಒಕ್ಕೂಟದ ನಿರ್ದೇಶಕ ತಿಪ್ಪಣ್ಣ ಸಾತಣ್ಣನವರ, ವಿಎಸ್‌ಎಸ್ ಉಪಾಧ್ಯಕ್ಷ ಬಸಯ್ಯ ಸಜ್ಜೆದಮಠ, ಯುವ ಮುಖಂಡರಾದ ನರಹರಿ ಕಟ್ಟಿ, ನಿರ್ದೇಶಕರಾದ ಪ್ರಕಾಶ ಪಾಸರ, ನೀಲಪ್ಪ ಕೊಳೂರ, ಮಹಾಬಳೇಶ್ವರ ಯಮಕನಮರಡಿ, ಪ್ರಕಾಶ ಕಲ್ಲಪ್ಪನವರ, ಸುರೇಶಗೌಡ್ರ ಪಾಟೀಲ, ಜೀವನ ಲಮಾಣಿ, ರಾಮಚಂದ್ರ ತಳವಾರ, ಸಂತೋಷ ಲಾಬಗೊಂಡ, ಬಾಹುಬಲಿ ಅಕ್ಕಿ, ಸಚಿನ ಮಡಿವಾಳರ, ಕಾಶಿನಾಥ ಕಳ್ಳಿಮನಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.