ADVERTISEMENT

ಹಾನಗಲ್: ಜೆಡಿಎಸ್‌, ಬಿಜೆಪಿ ಮುಖಂಡರು ಕಾಂಗ್ರೆಸ್‌ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 15:46 IST
Last Updated 24 ಮಾರ್ಚ್ 2024, 15:46 IST
ಹಾನಗಲ್‌ನಲ್ಲಿ ಭಾನುವಾರ ಶಾಸಕ ಶ್ರೀನಿವಾಸ ಸಮ್ಮುಖದಲ್ಲಿ ಹಲವು ಮುಖಂಡರು, ಕಾರ್ಯಕರ್ತರು ಜೆಡಿಎಸ್, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಹಾನಗಲ್‌ನಲ್ಲಿ ಭಾನುವಾರ ಶಾಸಕ ಶ್ರೀನಿವಾಸ ಸಮ್ಮುಖದಲ್ಲಿ ಹಲವು ಮುಖಂಡರು, ಕಾರ್ಯಕರ್ತರು ಜೆಡಿಎಸ್, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು   

ಹಾನಗಲ್: ತಾಲ್ಲೂಕಿನ ಹಲವು ಮುಖಂಡರು, ಕಾರ್ಯಕರ್ತರು ಭಾನುವಾರ ಜೆಡಿಎಸ್, ಬಿಜೆಪಿ ತೊರೆದು ಶಾಸಕ ಶ್ರೀನಿವಾಸ ಮಾನೆ ಸಮ್ಮುಖದಲ್ಲಿ ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಮುಖಂಡರಾದ ಏಳುಕೋಟೆಪ್ಪ ಹಾವಳೇರ, ಘನಶಾಮ ದೇಶಪಾಂಡೆ, ಶಂಕರ ದೇಶಪಾಂಡೆ, ನಿರಂಜನ ಶಾಂತಪುರಮಠ, ರಮೇಶ ಅರಳೇಶ್ವರ
ಜೆಡಿಎಸ್ ತೊರೆದು ಹಾಗೂ ಮೃತ್ಯುಂಜಯ ಹಿರೇಮಠ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆ ಆಗಲಿ ಎನ್ನುವ ಉದ್ದೇಶದಿಂದ ಪಕ್ಷದ ಖಾತೆಗಳನ್ನು ಸೀಜ್ ಮಾಡಿಸಲಾಗಿದೆ. ದಬ್ಬಾಳಿಕೆಯ ಮೂಲಕ ಹತ್ತಿಕ್ಕುವ
ಯತ್ನ ನಡೆದಿದೆ. ಆದರೂ ಕೂಡ ಕಾಂಗ್ರೆಸ್ ಪಕ್ಷದ ಶಕ್ತಿ ನಿತ್ಯವೂ ವೃದ್ಧಿಯಾಗುತ್ತಿದೆ. ಬಿಜೆಪಿ, ಜೆಡಿಎಸ್ ತೊರೆದು ಅನೇಕ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ’
ಎಂದರು.

ADVERTISEMENT

ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ನಾಗಪ್ಪ ಸವದತ್ತಿ ಮಾತನಾಡಿ, ‘40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಉಪ ಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಗೆಲುವಿಗೆ ಶ್ರಮಿಸಿದ್ದೇವೆ. ಕಳೆದ ವರ್ಷ
ನಡೆದ ವಿಧಾನಸಭೆ ಚುನವಣೆಯಲ್ಲಿ ಮನೋಹರ ತಹಸೀಲ್ದಾರ್ ಜೊತೆಯಲ್ಲಿ ಜೆಡಿಎಸ್ ಸೇರಿದ್ದೆ. ಈಗ ಮನೋಹರ ಬಿಜೆಪಿಗೆ ಹೋಗಿದ್ದಾರೆ. ಹೀಗಾಗಿ ಅವರನ್ನು ಹಿಂಬಾಲಿಸದೇ ಮರಳಿ ಕಾಂಗ್ರೆಸ್
ಸೇರಿದ್ದೇವೆ. ಇದೀಗ ಮತ್ತೆ ತವರಿಗೆ ಬಂದ ಸಂತಸವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಜತೆಗೂಡಿ ಕಾಂಗ್ರೆಸ್ ಪಕ್ಷವನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಸಂಕಲ್ಪ ತೊಟ್ಟಿದ್ದೇವೆ’
ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಪುರಸಭೆ ಸದಸ್ಯರಾದ ಪರಶುರಾಮ ಖಂಡೂನವರ, ಮಹೇಶ ಪವಾಡಿ, ಖುರ್ಷಿದ್ಅಹ್ಮದ್ ಹುಲ್ಲತ್ತಿ,
ಶಂಶಿಯಾ ಬಾಳೂರ, ವಿರುಪಾಕ್ಷಪ್ಪ ಕಡಬಗೇರಿ, ಮೇಕಾಜಿ ಕಲಾಲ, ಮುಖಂಡರಾದ ಮಹದೇವಪ್ಪ ಬಾಗಸರ, ರವಿ ದೇಶಪಾಂಡೆ, ರಾಜು ಗುಡಿ, ಸುರೇಶ ನಾಗಣ್ಣನವರ, ಎಂ.ಆರ್.ಗುತ್ತಲ,
ಅಬ್ದುಲ್‌ಖಾದರ್‌ ಗಣಜೂರ, ನಿಯಾಜ್ ಸರ್ವಿಕೇರಿ, ಮುನ್ನಾ ನಾಯ್ಕನವರ, ಗೌಸ್‌ಮೊದೀನ್ ತಂಡೂರ, ಗಾಯಿತ್ರಿ ಕೊಲ್ಲಾಪೂರ, ಗುಲಾಬಸಾಬ ಬಡಗಿ, ಮೋಹನ ಬಸವಂತಕರ, ರಮೇಶ ಹಾದಿಮನಿ,
ನಾಗಪ್ಪ ಚವ್ಹಾಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.