
ತಿಳವಳ್ಳಿ: ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಳಗೊಂಡ ಎನ್.ಡಿ.ಎ ಮೈತ್ರಿಕೂಟವು 202 ಸ್ಥಾನಗಳನ್ನು ಪಡೆದು ಅಭೂತಪೂರ್ವ ಗೆಲುವು ಸಾಧಿಸಿರುವುದು ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಬಿಜೆಪಿ ತಿಳವಳ್ಳಿ ಮಹಾಶಕ್ತಿ ಕೇಂದ್ರದ ಪ್ರಮುಖ ಕುಮಾರ ಲಕ್ಮೋಜಿ ಹೇಳಿದರು.
ಗ್ರಾಮದ ಹರ್ಡೀಕರ ವೃತ್ತದಲ್ಲಿ ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಒಳಗೊಂಡ ಎನ್.ಡಿ.ಎ ಮೃತ್ರಿ ಕೂಟವು 202 ಸ್ಥಾನಗಳನ್ನು ಪಡೆದು ಗೆಲುವು ಪಡೆದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಆಡಳಿತದಲ್ಲಿ ಅವರು ನೀಡಿದಂತಹ ಜನಪರ ಯೋಜನೆಗಳು ಇಡೀ ದೇಶದಲ್ಲಿ ಬಿಜೆಪಿಯ ಪರವಾದ ಅಲೆ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇದು ಪಕ್ಷದ ಹಾಗೂ ಕಾರ್ಯಕರ್ತರ ಗೆಲುವಾಗಿದೆ. ಈ ಗೆಲುವು ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚು ಮಾಡಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ದಯಾನಂದ ಹಾವೇರಿ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿಯವರು ಮಾಡುತ್ತಿರುವಂತಹ ಅಭಿವೃದ್ಧಿ ಕಾರ್ಯಗಳೇ ಬಿಜೆಪಿಗೆ ವರದಾನವಾಗಿದ್ದು, ಮುಂದೆ ನಡೆಯುವಂತಹ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಬಿಹಾರ ರಾಜ್ಯಗಳ ಗೆಲುವು ಬಿಜೆಪಿ ಕಾರ್ಯಕರ್ತರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲು ಹುಮ್ಮಸ್ಸು ಮೂಡಿಸಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಶಿವಾನಂದ ಕೋಡಿಹಳ್ಳಿ, ಮಾರುತಿ ಈಳಿಗೇರ, ಸುನೀಲ ಬಾರ್ಕಿ, ಮಹದೇವ ತಳವಾರ, ರಾಘವೇಂದ್ರ ನರಸೋಜಿ, ಶಿವಲಿಂಗ ಯತ್ತಿನಹಳ್ಳಿ, ಮಂಜುನಾಥ ಪವಾರ, ಮಧುಕರ ಹುನಗುಂದ, ದರ್ಶನ ಈಳಿಗೇರ, ಸುರೇಶ ಉಡಗಣಿ, ರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.