
ರಾಣೆಬೆನ್ನೂರು: ‘ಪ್ರತಿಯೊಬ್ಬರೂ ಜಾತಿ, ಮತ ಭೇದವಿಲ್ಲದೆ ರಕ್ತದಾನ ಮಾಡುವುದರಿಂದ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ. ಸಮಾಜದಲ್ಲಿ ಸಹೋದರತ್ವ, ಉತ್ತಮ ಬಾಂಧವ್ಯ ಬೆಸೆಯುತ್ತದೆ’ ಎಂದು ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು.
ಇಲ್ಲಿಯ ಗೌರಿಶಂಕರ ನಗರದ ಸಿದ್ದಿವಿನಾಯಕ, ಆಂಜನೇಯ ಮತ್ತು ನವಗ್ರಹ ದೇವಸ್ಥಾನಗಳ ಆವರಣದಲ್ಲಿ ಬುಧವಾರ ಕಾಕಿ ಜನಸೇವಾ ಸಂಸ್ಥೆ ಹಾಗೂ ರಾಣೆಬೆನ್ನೂರು ಬ್ಲಡ್ ಬ್ಯಾಂಕ್ ಕೇಂದ್ರದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ದೇಹ ದಾನ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರಕ್ತದಾನ ಮಾಡುವುದು ಅಮೂಲ್ಯವಾದ ಕೊಡುಗೆ. ಇದು ಪ್ರತಿಯೊಬ್ಬರ ನೈತಿಕ ಹೊಣೆಯಾಗಿದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಬೇಕು’ ಎಂದರು.
ಕಾಕಿ ಜನಸೇವಾ ಸಂಸ್ಥೆ ಕಾರ್ಯದರ್ಶಿ ರೂಪಾ ಕಾಕಿ, ಕುರುಹಿನಶೆಟ್ಟಿ ಸೇವಾ ಸಮಾಜ ಸಂಘದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಶಿವಾನಂದ ಸಾಲಗೇರಿ, ಮಂಜುನಾಥ ಹೊಸಪೇಟೆ, ಹನುಮಂತಪ್ಪ ಕಾಕಿ, ಲಕ್ಷ್ಮಣ ಕನಕಿ, ವೆಂಕಟೇಶ ಕಾಕಿ, ನಿತ್ಯಾನಂದ ಕುಂದಾಪುರ, ಶಿವಾನಂದ ಬಗಾದಿ, ಪ್ರವೀಣ ಸುರಹೊನ್ನೆ, ಲಕ್ಷ್ಮೀ ಕಾಕಿ, ಸುಮಿತಾ ಕುರುವತ್ತಿ, ಕೊಟ್ರೇಶಪ್ಪ ಎಮ್ಮಿ, ಪ್ರಶಾಂತ ಬಳಿಗಾರ, ವಿ.ಎಸ್.ಹಿರೇಮಠ, ರಾಜು ಬೂದನೂರ, ರೋಟರಿ ಇನ್ನರ್ ಕ್ಲಬ್ ಅಧ್ಯಕ್ಷೆ ಮತ್ತು ವೈದ್ಯೆ ಡಾ.ರೂಪಾಲಿ ಪುನೀತ, ಸುಮಾ ಹೊಟ್ಟಿಗೌಡ್ರ, ರಕ್ತನಿಧಿ ಕೇಂದ್ರದ ಬಿರೇಶ ಹಳ್ಳಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.