ADVERTISEMENT

ಬ್ಯಾಡಗಿ ಮಾರುಕಟ್ಟೆ: ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡ ಮೆಣಸಿನಕಾಯಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 3:18 IST
Last Updated 19 ಡಿಸೆಂಬರ್ 2025, 3:18 IST
<div class="paragraphs"><p>ಬ್ಯಾಡಗಿ ಮೆಣಸಿನಕಾಯಿ</p></div>

ಬ್ಯಾಡಗಿ ಮೆಣಸಿನಕಾಯಿ

   

ಬ್ಯಾಡಗಿ: ಇಲ್ಲಿಯ ಎಪಿಎಂಸಿಯಲ್ಲಿ (ಕೃಷಿ ಉತ್ಪನ್ನ ಮಾರುಕಟ್ಟೆ) ಗುರುವಾರ 39,832 ಚೀಲ (9,958 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದು, ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಕಳೆದ ಡಿ.15ರಂದು ಮಾರುಕಟ್ಟೆಯಲ್ಲಿ ಒಟ್ಟು 41,862 ಚೀಲ (10,465 ಕ್ವಿಂಟಲ್‌) ಮಾರಾಟವಾಗಿದ್ದವು. 2 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹65,119ರಂತೆ, ಕಡ್ಡಿ ಮೆಣಿಸಿನಕಾಯಿ ₹55,699 ರಂತೆ ಹಾಗೂ ಗುಂಟೂರ ತಳಿ ₹16,529 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.

ADVERTISEMENT

ಜನೆವರಿ 15ರ ಬಳಿಕ ಆವಕದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ ಆಂಧ್ರಪ್ರದೇಶ, ತೆಲಂಗಾಣ, ಬಳ್ಳಾರಿ, ರಾಯಚೂರು, ಕುಂದಗೋಳ, ಸಂಶಿ ಮತ್ತಿತರ ಕಡೆಗಳಲ್ಲಿ ಬೆಳೆದ ಹೊಸ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದೆ. ಕಾರಣ ಬ್ಯಾಡಗಿ ಡಬ್ಬಿ ಹಾಗೂ ಕಡ್ಡಿ ತಳಿ ಮೆಣಸಿನಕಾಯಿ ಹೋಲುವ ತಳಿಗಳಿಗೆ ಬೇಡಿಕೆ ಹೆಚ್ಚಿದೆ.

ಮಾರುಕಟ್ಟೆಗೆ ಒಟ್ಟು 6,053 ಲಾಟ್‌ ಮೆಣಸಿನಕಾಯಿ ಟೆಂಡರ್‌ಗೆ ಇಡಲಾಗಿತ್ತು. ಈ ಪೈಕಿ ತೇವಾಂಶ ಹೆಚ್ಚಿರುವ ಮತ್ತು ಗುಣಮಟ್ಟದ ಕೊರತೆ ಇರುವ 271 ಲಾಟ್‌ಗಳಿಗೆ ವರ್ತಕರು ಟೆಂಡರ್‌ ನಮೂದಿಸಿಲ್ಲ. ಸರಾಸರಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಬ್ಯಾಡಗಿ ಡಬ್ಬಿ ₹36,209, ಬ್ಯಾಡಗಿ ಕಡ್ಡಿ ₹34,509 ಹಾಗೂ ಗುಂಟೂರ ತಳಿ ₹12,959ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 302 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ದರ (ಪ್ರತಿ ಕ್ವಿಂಟಲ್‌ಗೆ)
ಬ್ಯಾಡಗಿ ಕಡ್ಡಿ ₹4,069- ₹55,699
ಬ್ಯಾಡಗಿ ಡಬ್ಬಿ ₹4,509- ₹65,119
ಗುಂಟೂರ ತಳಿ ₹1,409- ₹15,529

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.