ADVERTISEMENT

ಕಾಗಿನೆಲೆಯಂತೆ ಕನಕದಾಸರ ಬಾಡದ ಅಭಿವೃದ್ಧಿಗೆ ಬದ್ದ: ಶಾಸಕ ಪಠಾಣ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 2:55 IST
Last Updated 2 ನವೆಂಬರ್ 2025, 2:55 IST
ಶಿಗ್ಗಾವಿ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಶುಕ್ರವಾರ ನಡೆದ ಕನಕದಾಸರ ಮತ್ತು ಒನಕೆ ಓಬವ್ವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಮಾತನಾಡಿದರು
ಶಿಗ್ಗಾವಿ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಶುಕ್ರವಾರ ನಡೆದ ಕನಕದಾಸರ ಮತ್ತು ಒನಕೆ ಓಬವ್ವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಮಾತನಾಡಿದರು   

ಶಿಗ್ಗಾವಿ: ಕನಕದಾಸರ ಬಾಡ ಅಭಿವೃದ್ಧಿಗೆ ಕಂಕಣ ಬದ್ದರಾಗಿದ್ದು, ಕನಕದಾಸರ ಕರ್ಮಭೂಮಿ ಕಾಗಿನೆಲೆ ಅಭಿವೃದ್ಧಿಯಂತೆ ಬಾಡದಲ್ಲಿಯೂ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಾಗುವುದು. ನ.8ರಂದು ನಡೆಯುವ ಕನಕದಾಸರ ಜಯಂತಿ ಕಾರ್ಯಕ್ರಮನ್ನು ಆದ್ದೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಶುಕ್ರವಾರ ನಡೆದ ಕನಕದಾಸರ ಮತ್ತು ಒನಕೆ ಓಬವ್ವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ₹34 ಕೋಟಿ ಅನುದಾನ ನೀಡಿದ್ದಾರೆ. ಹೀಗಾಗಿ ಪ್ರತ್ಯೇಕ ಬಾಡ ಅಭಿವೃದ್ಧಿ ಪ್ರಾಧಿಕಾರದ ಬೇಡ, ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದಡಿ ಬಾಡವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಶ್ರಮಿಸಲಾಗುವುದು ಎಂದರು.

ತಾಲ್ಲೂಕಿನ ಗುಡ್ಟದಚನ್ನಾಪುರ ಗ್ರಾಮಕ್ಕೆ ಕನಕದಾಸರು ಬಂದು ಚನ್ನಕೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಇದರ ಗತವೈಭವ ಮರಕಳಿಸುವಂತೆ ಚನ್ನಕೇಶವ ಮತ್ತು ಹೊರ ಬೀರಲಿಂಗೇಶ್ವರ ದೇವಸ್ಥಾನ ನಿಮರ್ಾಣಕ್ಕೆ ಕ್ರಮಕೈಗೊಂಡಿದ್ದೇನೆ. ಅವುಗಳ ಅಭಿವೃದ್ಧಿಗೆ 2 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ಬಾಡದಲ್ಲಿ ನಡೆಯುವ ಕನಕೋತ್ಸವದ ಜವಾದ್ಭಾರಿಗಳನ್ನು ವಹಿಸಿಕೊಂಡಿರುವ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ADVERTISEMENT

ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ, ತಾ.ಪಂ ಇಒ ಮಂಜುನಾಥ ಸಾಳೊಂಕೆ, ಬಿಇಒ ಎಂ.ಬಿ. ಅಂಬಿಗೇರ, ಶಿವಾನಂದ ಮ್ಯಾಗೇರಿ, ಎಂ.ಎನ್.ವೆಂಕೋಜಿ, ಎಸ್.ಎಫ್.ಮಣಕಟ್ಟಿ, ಗುಡ್ಡಪ್ಪ ಜಲದಿ, ಮಲ್ಲೇಶಪ್ಪ ಹರಿಜನ, ಎಂ.ಎನ್.ಹೊನಕೇರಿ, ಮುತ್ತಣ್ಣ ಗುಡಗೇರಿ, ಕುರಬ ಸಮಾಜದ ಅಧ್ಯಕ್ಷ ಚಂದ್ರಶೇಖರ ಮಾಯಣ್ಣವರ, ಬಸವರಾಜ ಜೇಕನಕಟ್ಟಿ, ಆಶೋಕ ಕಾಳೆ, ಬಸಲಿಂಗಪ್ಪ ನರಗುಂದ, ಸಂತೋಷ ಚಾಕಲಬ್ಬಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.