ADVERTISEMENT

ಹಾವೇರಿ: ಜಿಲ್ಲೆಯಲ್ಲಿ 150 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 3399ಕ್ಕೆ ಏರಿಕೆಯಾದ ಪ್ರಕರಣಗಳು: 23 ಮಂದಿ ಗುಣಮುಖ, ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 15:11 IST
Last Updated 23 ಆಗಸ್ಟ್ 2020, 15:11 IST
ಹಾವೇರಿ ಜಿಲ್ಲಾಡಳಿತ ಭವನ (ಸಾಂದರ್ಭಿಕ ಚಿತ್ರ)
ಹಾವೇರಿ ಜಿಲ್ಲಾಡಳಿತ ಭವನ (ಸಾಂದರ್ಭಿಕ ಚಿತ್ರ)   

ಹಾವೇರಿ: ಜಿಲ್ಲೆಯಲ್ಲಿ 13 ಮಂದಿ ಕೊರೊನಾ ವಾರಿಯರ್ಸ್‌ ಸೇರಿದಂತೆ ಭಾನುವಾರ 150 ಮಂದಿಗೆ ಕೋವಿಡ್–19‌ ದೃಢಪಟ್ಟಿದೆ. 23 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೂ ಒಟ್ಟು 3399 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ 1956 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಭಾನುವಾರದ 4 ಮರಣ ಪ್ರಕರಣ ಸೇರಿದಂತೆ ಒಟ್ಟು 74 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 1369 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಭಾನುವಾರ ದೃಢಗೊಂಡ ಪ್ರಕರಣಗಳಲ್ಲಿ ಬ್ಯಾಡಗಿ–13, ಹಾನಗಲ್‌–9, ಹಾವೇರಿ–66, ಹಿರೇಕೆರೂರು–14, ರಾಣೆಬೆನ್ನೂರು–22, ಸವಣೂರ–2, ಶಿಗ್ಗಾವಿ ತಾಲ್ಲೂಕಿನಲ್ಲಿ –24 ಪ್ರಕರಣಗಳು ಕಂಡು ಬಂದಿವೆ. ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆಯ ಗ್ರೂಪ್‌ –ಡಿ ನೌಕರ, ಶಿಕ್ಷಣ ಇಲಾಖೆ, ನ್ಯಾಯಾಂಗ ಇಲಾಖೆ, ಕೆಇಬಿ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಸೇರಿದಂತೆ ಒಟ್ಟು 150 ಮಂದಿಗೆ ಸೋಂಕು ತಗುಲಿದೆ.

ADVERTISEMENT

ಬಿಡುಗಡೆ:ರಾಣೆಬೆನ್ನೂರು–8, ಹಾವೇರಿ–9, ಬ್ಯಾಡಗಿ–2, ಹಾನಗಲ್‌–3, ಇತರೆ–1 ಸೇರಿದಂತೆ ಒಟ್ಟು 23 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು.

ಮರಣದ ವಿವರ:ಹಾವೇರಿ ತಾಲ್ಲೂಕಿನ ಕಳ್ಳಿಹಳ್ಳಿ ಗ್ರಾಮದ 60 ವರ್ಷದ (ಪಿ–284154) ತೀವ್ರ ಉಸಿರಾಟದ ಸಮಸ್ಯೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್‌ ದೃಢಪಟ್ಟ ನಂತರ ಆ.22ರಂದು ಮೃತಪಟ್ಟಿದ್ದಾರೆ. ಸಂಗೂರು ಗ್ರಾಮದ 65 ವರ್ಷದ ಮಹಿಳೆ (ಪಿ–278270) ಆ.21ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್‌ ದೃಢಪಟ್ಟು, ಅಂದೇ ಮೃತಪಟ್ಟಿದ್ದಾರೆ.

ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಗ್ರಾಮದ 60 ವರ್ಷದ ಪುರುಷ (ಪಿ–278271) ಆ.21ರಂದು ದಾಖಲಾಗಿದ್ದರು. ಕೋವಿಡ್‌ ದೃಢಪಟ್ಟು, ಅಂದೇ ಮೃತಪಟ್ಟಿದ್ದಾರೆ. ಮೋಟೆಬೆನ್ನೂರು ಗ್ರಾಮದ 58 ವರ್ಷದ ಪುರುಷ (ಪಿ–283157) ಆ.21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್‌ ದೃಢಪಟ್ಟು, ಆ.22ರಂದು ಮೃತಪಟ್ಟಿದ್ದಾರೆ. ಈ ನಾಲ್ವರ ಮೂಗಿನ ದ್ರವವನ್ನು ರ‍್ಯಾಪಿಡ್‌ ಆಂಟಿಜೆನ್‌ ಮೂಲಕ ಪರೀಕ್ಷೆ ಮಾಡಲಾಗಿತ್ತು. ಎಲ್ಲರ ಅಂತ್ಯಕ್ರಿಯೆಯನ್ನು ಕೋವಿಡ್‌ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.