ADVERTISEMENT

ಹಾವೇರಿಯಲ್ಲಿ ವೈದ್ಯ ಸೇರಿದಂತೆ 18 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 230ಕ್ಕೆ ಏರಿಕೆಯಾದ ಪ್ರಕರಣಗಳು: 50 ಮಂದಿ ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 14:45 IST
Last Updated 9 ಜುಲೈ 2020, 14:45 IST

ಹಾವೇರಿ: ಇಬ್ಬರು ಶುಶ್ರೂಷಕಿಯರು, ಇಬ್ಬರು ಕಾನ್‌ಸ್ಟೆಬಲ್‌, ಸರ್ಕಾರಿ ವೈದ್ಯ ಹಾಗೂ ಮೆಡಿಕಲ್‌ ರೆಪ್ರಸೆಂಟೇಟಿವ್‌ ಸೇರಿಗುರುವಾರ ಜಿಲ್ಲೆಯ 18 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 50 ಸೋಂಕಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 230 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. 116 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ. 112 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

ಹಾವೇರಿ ತಾಲ್ಲೂಕು–8, ಶಿಗ್ಗಾವಿ ತಾಲ್ಲೂಕು–2, ಬ್ಯಾಡಗಿ ತಾಲ್ಲೂಕು–1, ರಾಣೆಬೆನ್ನೂರು ತಾಲ್ಲೂಕು–5 ಹಾಗೂ ಹಾನಗಲ್‌ ತಾಲ್ಲೂಕಿನಲ್ಲಿ 2 ಪ್ರಕರಣಗಳು ಸೇರಿದಂತೆ ಗುರುವಾರ ಒಟ್ಟು 18 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.

ADVERTISEMENT

ಹಾವೇರಿ ತಾಲ್ಲೂಕಿನ ಕನವಳ್ಳಿಯ 55 ವರ್ಷದ ಪುರುಷ (ಎಚ್‌ವಿಆರ್‌ -213), 45 ವರ್ಷದ ಮಹಿಳೆ (ಎಚ್‌ವಿಆರ್‌ -214), 27 ವರ್ಷದ ಪುರುಷ (ಎಚ್‌ವಿಆರ್‌ -215), 23 ವರ್ಷದ ಯುವತಿ (ಎಚ್‌ವಿಆರ್‌ -216), ರಾಣೆಬೆನ್ನೂರು ನಗರದ 22 ವರ್ಷದ ಯುವತಿ (ಎಚ್‌ವಿಆರ್‌ -217), ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯ 32 ವರ್ಷದ ಪುರುಷ (ಎಚ್‌ವಿಆರ್‌ -218), ರಾಣೆಬೆನ್ನೂರಿನ 31 ವರ್ಷದ ಮಹಿಳೆ (ಎಚ್‌ವಿಆರ್‌ -219), ರಾಣೆಬೆನ್ನೂರು ಸಿದ್ಧೇಶ್ವರ ನಗರದ 42 ವರ್ಷದ ಪುರುಷ (ಎಚ್‌ವಿಆರ್‌ -220), ಶಿಗ್ಗಾವಿ ತಾಲ್ಲೂಕಿನ ಹೊಸೂರಯತ್ನಳ್ಳಿ ಗ್ರಾಮದ 70 ವರ್ಷದ ಪುರುಷ (ಎಚ್‌ವಿಆರ್‌ -221) ಸೋಂಕು ದೃಢಗೊಂಡಿದೆ.

ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ 35 ವರ್ಷದ ಮಹಿಳೆ (ಎಚ್‌ವಿಆರ್‌ -222), ರಾಣೆಬೆನ್ನೂರಿನ 40 ವರ್ಷದ ಮಹಿಳೆ (ಎಚ್‌ವಿಆರ್‌ -223), ಮೈಸೂರಿನಿಂದ ಆಗಮಿಸಿದ ಬಂಕಾಪುರದ ಚೌಡನಕೇರಿಯ 40 ವರ್ಷದ ಪುರುಷ (ಎಚ್‌ವಿಆರ್‌ -224), 27 ವರ್ಷದ ಹಾವೇರಿ ಜಿಲ್ಲಾ ಆಸ್ಪತ್ರೆ ಶುಶ್ರೂಷಕಿ (ಎಚ್‌ವಿಆರ್‌ -225), ಭೂ ವೀರಾಪುರದ ಕಂಟೈನಮೆಂಟ್ ಜೋನ್‍ನ 27 ವರ್ಷದ ಮಹಿಳೆ (ಎಚ್‌ವಿಆರ್‌ -226), ಹಾನಗಲ್ ತಾಲ್ಲೂಕು ಹೋತನಹಳ್ಳಿಯ ಕಂಟೈನಮೆಂಟ್ ಜೋನ್‍ನ 26 ವರ್ಷದ ಪುರುಷ (ಎಚ್‌ವಿಆರ್‌ -227), ರಾಣೆಬೆನ್ನೂರಿನ ಬಸವೇಶ್ವನಗರ 46 ವರ್ಷದ ಪುರುಷ (ಎಚ್‌ವಿಆರ್‌ -228), ಹಾವೇರಿಯ 20 ವರ್ಷದ ಯುವತಿ (ಎಚ್‌ವಿಆರ್‌ -229), ಹಾಗೂ 32 ವರ್ಷದ ಪುರುಷ (ಎಚ್‌ವಿಆರ್‌ -230)ನಿಗೆ ಸೋಂಕು ದೃಢಪಟ್ಟಿದೆ.

ಒಬ್ಬ ಮರಣ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಿಗ್ಗಾವಿ ತಾಲ್ಲೂಕಿನ ಕೋವಿಡ್ ಸೋಂಕಿತ ವ್ಯಕ್ತಿ ಜುಲೈ 8ರಂದು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನುಸಾರ ಶಿಗ್ಗಾವಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಸದರಿ ವ್ಯಕ್ತಿ ಧಾರವಾಡ ಜಿಲ್ಲಾ ಕೋವಿಡ್ -19 ಸೋಂಕಿತರು ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.