ADVERTISEMENT

514 ಮಂದಿಗೆ ಕೋವಿಡ್‌ ಲಸಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 2:40 IST
Last Updated 10 ಫೆಬ್ರುವರಿ 2021, 2:40 IST
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಕೋವಿಡ್‌ ಲಸಿಕೆ ಹಾಕಲಾಯಿತು 
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಕೋವಿಡ್‌ ಲಸಿಕೆ ಹಾಕಲಾಯಿತು    

ಹಾವೇರಿ: ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಗಳವಾರ ಎರಡನೇ ಹಂತದ ಕೋವಿಡ್‌ ಲಸಿಕಾ ಕಾರ್ಯಕ್ರಮ ಆರಂಭಗೊಂಡಿತು. 1407 ‘ಫ್ರಂಟ್‌ ಲೈನ್‌ ವರ್ಕರ್‌’‌ಗಳಿಗೆ ಲಸಿಕೆ ಹಾಕುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಆದರೆ,ಇವರ ಪೈಕಿ 514 ಮಂದಿ ಮಾತ್ರ (ಶೇ 37) ಲಸಿಕೆ ಹಾಕಿಸಿಕೊಂಡರು.

ಫ್ರಂಟ್‌ ಲೈನ್‌ ವರ್ಕರ್‌ಗಳಾದ ಪೊಲೀಸ್, ಕಂದಾಯ, ನಗರ ಸ್ಥಳೀಯ ಸಂಸ್ಥೆ, ಪಂಚಾಯತ್‌ ರಾಜ್‌ ಇಲಾಖೆಗಳ ನೌಕರರಿಗೆ ಲಸಿಕೆ ಹಾಕಲಾಯಿತು. ಬ್ಯಾಡಗಿ–ಶೇ 34, ಹಾನಗಲ್‌– ಶೇ 25, ಹಿರೇಕೆರೂರು– ಶೇ 21, ರಾಣೆಬೆನ್ನೂರು–ಶೇ 42, ಸವಣೂರು–ಶೇ 22, ಶಿಗ್ಗಾವಿ– ಶೇ 67 ಹಾಗೂ ಹಾವೇರಿ ತಾಲ್ಲೂಕಿನಲ್ಲಿ ಶೇ 45ರಷ್ಟು ಗುರಿ ಸಾಧನೆಯಾಯಿತು.

ಮೊದಲ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ‘ಹೆಲ್ತ್‌ ವರ್ಕರ್‌’ಗಳಿಗೆ ಕೋವಿಡ್‌ ಲಸಿಕೆಯನ್ನು ಫೆ.6ರವರೆಗೆ ಹಾಕಲಾಗಿದೆ. 8691 ಮಂದಿಗೆ ಲಸಿಕೆ ಹಾಕುವ ಗುರಿಯನ್ನು ಹಾಕಿಕೊಂಡು, ಇವರ ಪೈಕಿ 5313 ಮಂದಿಗೆ (ಶೇ 61) ಲಸಿಕೆ ಹಾಕಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.