ADVERTISEMENT

ಹಾವೇರಿ: ಭಾರಿ ಮಳೆಯಿಂದಾಗಿ ನೆಲಕ್ಕುರುಳಿದ ಬಾಳೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 15:14 IST
Last Updated 26 ಜೂನ್ 2020, 15:14 IST
ಹಾವೇರಿ ತಾಲ್ಲೂಕು ಬಸಾಪುರ ಗ್ರಾಮದಲ್ಲಿ ಭಾರಿ ಮಳೆಗೆ ನೆಲಕ್ಕುರುಳಿದ ಬಾಳೆ
ಹಾವೇರಿ ತಾಲ್ಲೂಕು ಬಸಾಪುರ ಗ್ರಾಮದಲ್ಲಿ ಭಾರಿ ಮಳೆಗೆ ನೆಲಕ್ಕುರುಳಿದ ಬಾಳೆ   

ಹಾವೇರಿ: ತಾಲ್ಲೂಕಿನ ಬಸಾಪೂರ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದ ರೈತರ ಹೊಲಗಳಿಗೆ ವಿಪರೀತ ನೀರು ನುಗ್ಗಿದ ಪರಿಣಾಮ ಬಾಳೆ-ಅಡಿಕೆ ಸೇರಿದಂತೆ ಮೆಣಸಿನಕಾಯಿ ಗಿಡಗಳು ಸಂಪೂರ್ಣ ನೆಲಕಚ್ಚಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

ಗ್ರಾಮದ ಪ್ರಶಾಂತ ಸುಭಾಸ್ ಚಾವಡಿಯವರಿಗೆ ಸೇರಿದ 6 ಎಕರೆಯ ಬಾಳೆ-ಅಡಿಕೆ ಗಿಡ ನೆಲಕ್ಕೆ ಉರಳಿವೆ.
ಇದೇ ರೀತಿ ಗ್ರಾಮದಲ್ಲಿ ಹತ್ತಾರು ಎಕರೆ ಮೆಣಸಿನಕಾಯಿ ಗಿಡಗಳು ನೆಲಕಚ್ಚಿದ್ದು, ಮೆಣಸಿನಕಾಯಿ ಬೆಳೆಗಾರರು ಲಕ್ಷಾಂತರ ರೂಪಾಯಿ ಹಾನಿಯನ್ನು ಅನುಭವಿಸಿದ್ದು, ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ.

ಅದೇ ರೀತಿ ಮಾವು, ಕಬ್ಬಿನ ಹೊಲಗಳಲ್ಲಿಯೂ ಸಾಕಷ್ಟು ನೀರು ಸಂಗ್ರಹವಾಗಿದ್ದರಿಂದ ಕಬ್ಬು ಹಾಗೂ ಮಾವಿನ ಗಿಡಗಳಲ್ಲಿ ಕೂಡಾ ಸಾಕಷ್ಟು ಹಾನಿಯಾಗಿವೆ. ಗುರುವಾರ ವಿಪರೀತವಾಗಿ ಸುರಿದ ಮಳೆಯಿಂದ ಹಾನಿಗೊಳಗಾದ ರೈತರ ಹಾನಿಯನ್ನು ಈ ಕೂಡಲೇ ತೋಟಗಾಗಿಕೆ ಇಲಾಖೆ ಹಾಗೂ ಕೃಷಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ ಚಾವಡಿ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.