
ರಟ್ಟೀಹಳ್ಳಿ : ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು, ಅನಾಮಧೇಯ ಕರೆ ಸ್ವೀಕರಿಸಿ ಮಾತನಾಡುವಾಗ ಬ್ಯಾಂಕ್ ಮಾಹಿತಿ ಹಂಚಿಕೊಳ‍್ಳಬಾರದು. ಹಣದ ಆಸೆಗೆ ನಮ್ಮ ಎಲ್ಲ ವಿವರ ತಿಳಿಸಿದಾಗ ಇಂತಹ ಅಪರಾಧಗಳು ನಡೆಯುತ್ತವೆ. ಕಾರಣ ಯುವಕರು ಸೈಬರ್ ವಂಚನೆ ತಡೆಗಟ್ಟಲು ಸ್ವಯಂ ಜಾಗೃತಿ ವಹಿಸಬೇಕು ಎಂದು ರಟ್ಟೀಹಳ್ಳಿ ಪಿಎಸ್ಐ ಜಗದೀಶ.ಜೆ ತಿಳಿಸಿದರು.
ಅವರು ಪಟ್ಟಣದ ಪ್ರಿಯದರ್ಶಿನಿ ಕಾಲೇಜಿನಲ್ಲಿ ಬುಧವಾರ ಪೊಲೀಸ್ ಇಲಾಖೆ ಮತ್ತು ಪ್ರಿಯದರ್ಶಿನಿ ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂಚಾರ ನಿಯಮ ಮತ್ತು ಸೈಬರ್ ಅಪರಾಧ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷವಾಗಿ ವಿದ್ಯಾರ್ಥಿಗಳು ರಸ್ತೆ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹೆಲ್ಮೆಟ್ ಧರಿಸುವುದು, ಡಿ.ಎಲ್. ಹೊಂದಿರುವುದು, ವಾಹನಗಳನ್ನು ಜಾಗೃತೆಯಿಂದ ಓಡಿಸುವುದು ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಸಾಲಿ ಮಾತನಾಡಿ, ಯುವಕರು ಬೈಕ್‌ಗಳನ್ನು ಅತೀವೇಗವಾಗಿ ಓಡಿಸುವ ಹವ್ಯಾಸವನ್ನು ಕೈಬಿಡಬೇಕು. ಜೊತೆಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಪ್ರಾಚಾರ್ಯ ರಾಘವೇಂದ್ರ ಎ.ಜಿ. ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂ.ಬಿ.ತಲ್ಲೂರ, ಎಚ್.ಬಿ.ಕೆಂಚಳ್ಳಿ, ಎಸ್.ಎಸ್.ತಾಂದಳೆ, ಶಾಂತಮ್ಮ.ಎಚ್, ವಿ.ಎಸ್.ರೂಳಿ, ವೈ.ವೈ.ಮರಳೀಹಳ್ಳಿ ಸಿ.ಎಸ್.ಕಮ್ಮಾರ, ಎಂ.ಎಂ.ಪ್ಯಾಟೀ, ರೋಹಿಣಿ, ಪೊಲೀಸ್ ಇಲಾಖೆ ಸಿಬ್ಬಂದಿ ಅಶೋಕ ಕೊಡ್ಲಿ, ವಿ.ಎಚ್.ಕೊಪ್ಪದ, ಕುಮಾರ ಕೊಣ್ತಿ, ಪರಶುರಾಮ ನಾಯಕ್ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.