ADVERTISEMENT

ಅರ್ಥಶಾಸ್ತ್ರ ಯಶಸ್ವಿಗೆ ಮಾರ್ಗ: ವಿರೇಶ ಕುಮ್ಮೂರ

ಅರ್ಥಶಾಸ್ತ್ರದ ವಿಷಯ ಪ್ರದರ್ಶನ, ಕಾರ್ಯಾಗಾರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:28 IST
Last Updated 17 ನವೆಂಬರ್ 2025, 4:28 IST
ಶಿಗ್ಗಾವಿ ಪಟ್ಟಣದ ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಅರ್ಥಶಾಸ್ತ್ರ ವಿಭಾಗದಿಂದ ನಡೆದ ಅರ್ಥಶಾಸ್ತ್ರದ ವಿಷಯ ಪ್ರದರ್ಶನ, ಕಾರ್ಯಾಗಾರದಲ್ಲಿ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವಿರೇಶ ಕುಮ್ಮೂರ ಮಾತನಾಡಿದರು 
ಶಿಗ್ಗಾವಿ ಪಟ್ಟಣದ ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಅರ್ಥಶಾಸ್ತ್ರ ವಿಭಾಗದಿಂದ ನಡೆದ ಅರ್ಥಶಾಸ್ತ್ರದ ವಿಷಯ ಪ್ರದರ್ಶನ, ಕಾರ್ಯಾಗಾರದಲ್ಲಿ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವಿರೇಶ ಕುಮ್ಮೂರ ಮಾತನಾಡಿದರು    

ಶಿಗ್ಗಾವಿ: ಆರ್ಥಿಕ ವ್ಯವಸ್ಥೆ ಬದಲಾವಣೆ ಯಶಸ್ವಿಗೆ ಮಾರ್ಗದರ್ಶಿಯಾಗಿದ್ದು, ಅದರಿಂದ ಮನುಷ್ಯನ ನಿತ್ಯದ ಚಟುವಟಿಕೆಗಳಲ್ಲಿ ನಿರತರಾಗುವ ಮೂಲಕ ಬದಲಾವಣೆ ಕಾಣಲು ಸಾಧ್ಯವಿದೆ ಎಂದು ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವಿರೇಶ ಕುಮ್ಮೂರ ಹೇಳಿದರು.

ಪಟ್ಟಣದ ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಅರ್ಥಶಾಸ್ತ್ರ ವಿಭಾಗದಿಂದ ನಡೆದ ಅರ್ಥಶಾಸ್ತ್ರದ ವಿಷಯ ಪ್ರದರ್ಶನ, ಕಾರ್ಯಾಗಾರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಆರ್ಥಿಕ ವ್ಯವಸ್ಥೆ ಕುರಿತು ಅಧ್ಯಯನ ಮಾಡುವ ಮೂಲಕ ಭವಿಷ್ಯದ ಏಳ್ಗೆ ಕುರಿತು ಚಿಂತನೆ ಮಾಡುವುದು ಮುಖ್ಯವಾಗಿದೆ ಎಂದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ತಲ್ಲೂರ ಮಾತನಾಡಿ, ಕಾಯಕದಲ್ಲಿ ಮೇಲು ಕೀಳು ಭಾವನೆಗಳನ್ನು ಬಿಟ್ಟು ಪ್ರತಿಯೊಂದು ಉದ್ಯೋಗದಲ್ಲಿ ಗುರಿ, ಉದ್ದೇಶಗಳನ್ನು ಇಟ್ಟುಕೊಂಡು ಶ್ರಮವಹಿಸಿ ದುಡಿದಾಗ ಮಾತ್ರ ಯಶಸ್ವಿ ಕಾಣಲು ಸಾಧ್ಯವಿದೆ. ಆದರೆ ಮಾಡುವ ಉದ್ಯೋಗಗಳ ಮೇಲೆ ನಂಬಿಕೆ ಮತ್ತು ಯಶಸ್ವಿಗಾಗಿ ಛಲದಿಂದ ಸಾಗುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ಪ್ರಾರಂಭಿಕ ಹಂತದಲ್ಲಿಯೇ ಉದ್ಯೋಗ ಆಯ್ಕೆ ಮಾಡಿಕೊಳ್ಳುವುದು ಅವಶ್ಯವಾಗಿದೆ ಎಂದರು.

ADVERTISEMENT

ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎ.ಸಿ.ವಾಲಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಿ.ಎಸ್.ಸೊಗಲದ, ಪ್ರೊ.ಲತಾ ಕೋರ್ಪಡೆ, ಪ್ರೊ.ಡಿ.ಎಸ್.ಭಟ್, ಪ್ರೊ.ಕೆ.ಎನ್.ರಾಶಿಕರ, ಪ್ರೊ.ಶೈಲಜಾ ಹುದ್ದಾರ, ಪ್ರೊ.ಸುರೇಶ ವಾಲ್ಮೀಕಿ, ವೈಷ್ಣವಿ ಆಜೂರ, ಪ್ರೊ.ಆನಂದ ಇಂದೂರ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.