ADVERTISEMENT

ಶಾಸಕರ ಹೆಸರಿನಲ್ಲಿ ಫೇಸ್‌ ಬುಕ್‌ ನಕಲಿ ಖಾತೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 7:19 IST
Last Updated 10 ನವೆಂಬರ್ 2021, 7:19 IST
ಅರುಣಕುಮಾರ ಪೂಜಾರ, ಶಾಸಕ, ರಾಣೆಬೆನ್ನೂರು
ಅರುಣಕುಮಾರ ಪೂಜಾರ, ಶಾಸಕ, ರಾಣೆಬೆನ್ನೂರು   

ರಾಣೆಬೆನ್ನೂರು: ಶಾಸಕ ಅರುಣಕುಮಾರ ಪೂಜಾರ ಅವರ ಹೆಸರಿನಲ್ಲಿ ನ.8 ರಂದು ಫೇಸ್‌ ಬುಕ್‌ ನಕಲಿ ಖಾತೆ ತೆರೆಯಲಾಗಿದೆ. ‘ನನ್ನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ಕೇಳುತ್ತಿದ್ದಾರೆ. ನಮ್ಮ ಆಪ್ತ ಸಹಾಯಕ ಚಂದ್ರಶೇಖರ ಹೆಸರಿನಲ್ಲಿ ಕೂಡ ಫೇಸ್‌ ಬುಕ್‌ ನಕಲಿ ಖಾತೆ ಸೃಷ್ಟಿಸಿದ್ದಾರೆ. ಹಣ ಬೇಕಾಗಿದೆ, ನಾಳೆ ಬೆಳಿಗ್ಗೆ ಕೊಡುತ್ತೇವೆ ಎಂದು ಕೇಳುತ್ತಿದ್ದಾರೆ. ಇಂತಹ ಖಾತೆಯ ಬಗ್ಗೆ ತಾಲ್ಲೂಕಿನ ಜನತೆ ಜಾಗರೂಕರಾಗಿರಬೇಕು. ಹಣ ಹಾಕಿ ಮೋಸ ಹೋಗಬಾರದು ಎಂದು ಶಾಸಕ ಅರುಣಕುಮಾರ ಪೂಜಾರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.