ADVERTISEMENT

₹5 ಲಕ್ಷ ಬೆಳೆ ಬೆಂಕಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:10 IST
Last Updated 14 ಫೆಬ್ರುವರಿ 2020, 9:10 IST
ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿರುವ ಗ್ರಾಮಸ್ಥರು
ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿರುವ ಗ್ರಾಮಸ್ಥರು   

ತಡಸ: ಗ್ರಾಮದ ರೈತರಾದ ಪರಸಪ್ಪ ಧರಿಯಪ್ಪ ಬಾಳಿಕಾಯಿ ಇವರ 11 ಎಕರೆ ಜಮೀನಿನಲ್ಲಿ ಬೆಳೆದ ಗೋವಿನ ಜೋಳದ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು ₹ 5 ಲಕ್ಷ ಮೌಲ್ಯದ ಫಸಲು ಸುಟ್ಟು ಭಸ್ಮವಾಗಿದೆ.

ಇದೇ ವೇಳೆ ಜಮೀನಿನ ಅಕ್ಕ ಪಕ್ಕದಲ್ಲಿದ್ದ ರೈತರಾದ ಮಂಜುನಾಥ ನಂಜಪ್ಪನವರ, ಚಂದ್ರು ಗಾಣಿಗೇರ, ಚನ್ನಪ್ಪ ಬಾಳಿಕಾಯಿ, ಪದ್ಮರಾಜ ದ್ಯಾಮಾಪುರ, ಪರಸಪ್ಪ ತಿಮ್ಮಾಪುರ, ಮಲ್ಲೇಶ ಬಾಳಿಕಾಯಿ, ನಿಂಗಪ್ಪ ಹಡಪದ, ಭರತೇಶ ಹಳ್ಳಿಯವರ ಮತ್ತು ಗ್ರಾಮಸ್ಥರು ಬೆಂಕಿಯನ್ನು ಆರಿಸಲು ಹರಸಾಹಸಪಟ್ಟರು. ಈ ಕುರಿತು ತಡಸ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT