
ಬ್ಯಾಡಗಿ: ಪಟ್ಟಣದ ಸ್ನೇಹ ಸದನದಲ್ಲಿ ರೋಟರಿ ಕ್ಲಬ್ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ವತಿಯಿಂದ ಬುಧವಾರ ನೇತ್ರ ಉಚಿತ ತಪಾಸಣಾ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ 62 ಜನರ ತಪಾಸಣೆ ನಡೆಸಿ, 44 ಜನರಿಗೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಅವರಿಗೆ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಇನ್ನುಳಿದ 13 ಜನರಿಗೆ ಕನ್ನಡಕ ಶಿಫಾರಸ್ಸು ಮಾಡಲಾಯಿತು ಎಂದು ರೋಟರಿ ಕ್ಲಬ್‌ನ ಮಂಜುನಾಥ ಉಪ್ಪಾರ ತಿಳಿಸಿದರು.
ಈ ವೇಳೆ ರೋಟರಿ ಕ್ಲಬ್ ಅಧ್ಯಕ್ಷ ಅನಿಲಕುಮಾರ, ಉಪಾಧ್ಯಕ್ಷ ಆನಂದಗೌಡ ಸೊರಟೂರ, ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಖಜಾಂಚಿ ಕಲ್ಲಪ್ಪ ಚೂರಿ, ಜಂಟಿ ಕಾರ್ಯದರ್ಶಿ ಕಿರಣ ಮಾಳೇನಹಳ್ಳಿ, ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ಪರೀಕ್ಷಕ ಸುನೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.