ADVERTISEMENT

ತಡಸ | ಗಾಯತ್ರಿ ದೇಗುಲ ವಾರ್ಷಿಕೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 4:43 IST
Last Updated 30 ಜನವರಿ 2026, 4:43 IST
ಶ್ರೀ ಗಾಯತ್ರೀ ದೇವಿ  
ಶ್ರೀ ಗಾಯತ್ರೀ ದೇವಿ     

ತಡಸ: ಇಲ್ಲಿನ ಗಾಯತ್ರಿ ಮಾತಾ ದೇಗುಲದ 26ನೇ ವಾರ್ಷಿಕ ಮಹೋತ್ಸವ ಜ.31ರಂದು ಜರುಗಲಿದೆ. 

ಜ.30ರಂದು ಬೆಳಗ್ಗೆ 11ಕ್ಕೆ ಗುರುಚರಿತ್ರ ಮಂಗಳ, ಸಂಜೆ 6ಕ್ಕೆ ಉದಕ ಶಾಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಜ.31ರಂದು ಬೆಳಗ್ಗೆ 6.30ಕ್ಕೆ ಕಾಕಡಾರತಿ, 7ಕ್ಕೆ ಸಾಮೂಹಿಕ ಗಾಯತ್ರಿ ಜಪ, 9ಕ್ಕೆ ಹೋಮ ಹವನ 10ಕ್ಕೆ ಗಾಯತ್ರಿ ಮಾತೆಗೆ ಮಹಾಭಿಷೇಕ, ಮಧ್ಯಾಹ್ನ 2ಕ್ಕೆ ಹವನ ಪೂರ್ಣಾಹುತಿ ಕಾರ್ಯಕ್ರಮ ಜರುಗಲಿದೆ. 

ADVERTISEMENT

ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ಫಕೀರ ಸಿದ್ದರಾಮ ಸ್ವಾಮೀಜಿ, ಹುಬ್ಬಳ್ಳಿ ಅದೈತ ವಿದ್ಯಾಶ್ರಮದ ಪ್ರಣವಾನಂದತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.