
ಪ್ರಜಾವಾಣಿ ವಾರ್ತೆ
ಬ್ಯಾಡಗಿ: ಪಟ್ಟಣದ ವೀರಭದ್ರೇಶ್ವರ, ಕಲ್ಮೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಗುಗ್ಗಳ, ರಥೋತ್ಸವ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ಸ್ವಾಮಿಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಜರುಗಿದವು. ಗುಗ್ಗಳೊತ್ಸವದಲ್ಲಿ ಪುರವಂತರು ವೀರಭದ್ರೇಶ್ವರ ಕುರಿತು ಒಡಪುಗಳನ್ನು ಪ್ರಸ್ತುತಪಡಿಸಿದರು. ಮಹಿಳೆಯರು ಆರತಿ ಹಿಡಿದು ಗುಗ್ಗಳ ಜೊತೆಗೆ ಸಾಗಿದರು.
ಭಕ್ತರು ಶಸ್ತ್ರ ಹಾಕಿಸುವುದು, ಅಗ್ನಿಕುಂಡ ಪ್ರವೇಶಿಸಿ ದೇವರ ಹರಕೆ ತೀರಿಸಿದರು. ಸಂಜೆ ದೇವಸ್ಥಾನದ ಆವರಣದಿಂದ ಸಕಲ ವಾಧ್ಯ ಮೇಳದೊಂದಿದೆ ಆರಂಭವಾದ ರಥೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.