ADVERTISEMENT

ಹಾನಗಲ್‌ನಲ್ಲಿ ಹಿಂದೂ ಸಮ್ಮೇಳನ: ಭವ್ಯ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 8:34 IST
Last Updated 23 ಫೆಬ್ರುವರಿ 2026, 8:34 IST
ಹಾನಗಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನ ಶೋಭಾಯಾತ್ರೆಯಲ್ಲಿ ವಿವಿಧ  ದಾರ್ಶನಿಕರ ವೇಷಭೂಷಣ ಗಮನ ಸೆಳೆದವು 
ಹಾನಗಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನ ಶೋಭಾಯಾತ್ರೆಯಲ್ಲಿ ವಿವಿಧ  ದಾರ್ಶನಿಕರ ವೇಷಭೂಷಣ ಗಮನ ಸೆಳೆದವು    

ಹಾನಗಲ್: ಪಟ್ಟಣದಲ್ಲಿ ಹಿಂದೂ ಸಮ್ಮೇಳನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶೋಭಾಯಾತ್ರೆಗೆ ಎನ್‌ಸಿಜೆಸಿ ಕಾಲೇಜು ಎದುರು ಗೋವು ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಭವ್ಯ ಶೋಭಾಯಾತ್ರೆಯು ಪಟ್ಟಣದ ಮುಖ್ಯ ರಸ್ತೆಯ ಮೂಲಕ ಸಂಚರಿಸಿ ತಾರಕೇಶ್ವರ ದೇವಸ್ಥಾನ ಆವರಣ ತಲುಪಿತು. ಹಿಂದೂ ಧರ್ಮದ ಮಹತ್ವ ಸಾರಿದ ದಾರ್ಶನಿಕರು, ಸಂತರು, ಮಹನೀಯರ ಭಾವಚಿತ್ರಗಳು ಯಾತ್ರೆಯ ಮೆರುಗು ಹೆಚ್ಚಿಸಿದವು. ದೇವರು, ಶರಣರ ವೇಷಭೂಷಣ ತೊಟ್ಟ ಕಲಾವಿದರು ಕಂಗೊಳಿಸಿದರು. 

ಇಲ್ಲಿನ ರಾಷ್ಟ್ರೋತ್ಥಾನ ಶಾಲೆ ವಿದ್ಯಾರ್ಥಿಗಳು ಭಕ್ತಿಗೀತೆಗಳಿಗೆ ಕೋಲಾಟ ನೃತ್ಯ ಮಾಡಿದರು. ವಿವಿಧ ಸಂಘಟನೆ ಹಾಗೂ ರಾಜಕೀಯ ಮುಖಂಡರು ಯಾತ್ರೆಯಲ್ಲಿ ಭಾಗವಹಿಸಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.