ADVERTISEMENT

ಹಾನಗಲ್ | ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ಸಾವು

​ಪ್ರಜಾವಾಣಿ ವಾರ್ತೆ
Published 13 ಮೇ 2025, 14:37 IST
Last Updated 13 ಮೇ 2025, 14:37 IST
ಹಾನಗಲ್‌ ತಾಲ್ಲೂಕಿನ ಚಿಕ್ಕಾಂಶಿ ಕೆರೆಯಲ್ಲಿ ಮೃತ ದೇಹಗಳ ಶೋಧ ಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ಕೈಗೊಂಡಿದ್ದರು.
ಹಾನಗಲ್‌ ತಾಲ್ಲೂಕಿನ ಚಿಕ್ಕಾಂಶಿ ಕೆರೆಯಲ್ಲಿ ಮೃತ ದೇಹಗಳ ಶೋಧ ಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ಕೈಗೊಂಡಿದ್ದರು.   

ಹಾನಗಲ್: ತಾಲ್ಲೂಕಿನ ಚಿಕ್ಕಾಂಶಿ ಗ್ರಾಮದ ಕೆರೆಯಲ್ಲಿ ಮುಳುಗಿ ಗ್ರಾಮದ ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಬಸವರಾಜ ಬಡಕಣ್ಣನವರ (38) ಮತ್ತು ಮಾಲತೇಶ ಕುರುಬರ (19) ಮೃತಪಟ್ಟವರು. ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮೃತ ದೇಹಗಳ ಶೋಧ ಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ಕೈಗೊಂಡಿದ್ದರು. ಮಾಲತೇಶ ಕುರುಬರ ಮೃತ ದೇಹ ಮಾತ್ರ ಸಿಕ್ಕಿದೆ. ಸಂಜೆಯ ತನಕ ನಡೆದ ಕಾರ್ಯಾಚರಣೆಯಲ್ಲಿ ಮತ್ತೊಂದು ಮೃತ ದೇಹದ ಪತ್ತೆಯಾಗಲಿಲ್ಲ. ನಾಳೆಗೆ ಮತ್ತೆ ಶೋಧ ಕಾರ್ಯ ಮುಂದುವರೆಸಲಾಗುತ್ತದೆ.

ADVERTISEMENT

ತಾಲ್ಲೂಕಿನ ಕೊಂಡೋಜಿ ಗ್ರಾಮದ ಮಾವಿನ ತೋಟದಲ್ಲಿ ಕೆಲಸಕ್ಕಿದ್ದ ಗದಗ ಜಿಲ್ಲೆಯ ಬಸಾಪುರ ಗ್ರಾಮದ ಮರಿಯವ್ವ ನಾಯ್ಕರ (60) ಸೋಮವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರ ಸಂಜೆ ತಾಲ್ಲೂಕಿನ ಅಲ್ಲಲ್ಲಿ ಗಾಳಿ, ಗುಡುಗು ಸಮೇತ ಬಿರುಸಿನ ಮಳೆಯಾಗಿತ್ತು. ಮಂಗಳವಾರ ಮಧ್ಯಾಹ್ನ ಹಾನಗಲ್ ಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಒಂದು ತಾಸು ಸುರಿದ ಮಳೆಗೆ ಚರಂಡಿಗಳು ಮಳೆ ನೀರಿನಿಂದ ತುಂಬಿ ಹರಿದವು.

ಬಸವರಾಜ ಬಡಕಣ್ಣನವರ
ಮಾಲತೇಶ ಕುರುಬರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.