ADVERTISEMENT

ಹಾವೇರಿ: ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬ ಆಚರಣೆಗೆ ಸಕಲ ಸಿದ್ಧತೆ

ಹೂವು, ಹಣ್ಣು, ಪೂಜಾ ಸಾಮಗ್ರಿ ವ್ಯಾಪಾರ ಬಲುಜೋರು: ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:53 IST
Last Updated 15 ಫೆಬ್ರುವರಿ 2026, 5:53 IST
ರಾಣೆಬೆನ್ನೂರಿನ ಮಾರುಕಟ್ಟೆಯಲ್ಲಿ ಶನಿವಾರ ಮಾರಾಟಕ್ಕೆ ಇರಿಸಿದ್ದ ಹೂವುಗಳು
ರಾಣೆಬೆನ್ನೂರಿನ ಮಾರುಕಟ್ಟೆಯಲ್ಲಿ ಶನಿವಾರ ಮಾರಾಟಕ್ಕೆ ಇರಿಸಿದ್ದ ಹೂವುಗಳು   

ಹಾವೇರಿ: ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬವನ್ನು ಭಾನುವಾರ ಅರ್ಥಪೂರ್ಣವಾಗಿ ಆಚರಿಸಲು ಜನರು ತಯಾರಿ ಮಾcರೆ.

ಹಬ್ಬದ ಮುನ್ನಾದಿನವಾದ ಶನಿವಾರ ನಗರದಲ್ಲಿ ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ತರಹೇವಾರಿ ಹಣ್ಣುಗಳನ್ನು ಜನರು ಖರೀದಿಸಿದರು.

ನಗರದ ಸಿಂದಗಿಮಠ ಸೇರಿದಂತೆ ವಿವಿಧ ಮಠಗಳಲ್ಲಿ ಭಾನುವಾರ ಪೂಜೆಗಳು ನಡೆಯಲಿವೆ.  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ಶಿವಾಲಯವನ್ನೂ ದೀಪಗಳಿಂದ ಅಲಂಕರಿಸಲಾಗಿದೆ. 

ADVERTISEMENT

ರಾಣೆಬೆನ್ನೂರು:  ನಗರದ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾತ್ರಿಯಿಡಿ ಅಖಂಡ ಭಜನೆ, ಮಾರನೇ ದಿನ ಹರಿ ಸೇವೆ ನಡೆಯುತ್ತದೆ. ಹಬ್ಬ ನಿಮಿತ್ತ ಹೂ, ಹಣ್ಣುಗಳ ಬೆಲೆ ಏರಿಕೆ ಸಾಮಾನ್ಯವಾಗಿದೆ. ಜಾಗರಣೆ ಜತೆಗೆ  ಭಕ್ತರು ಹಣ್ಣು, ಹಂಪಲು ಸೇವಿಸಿ ಉಪವಾಸ ಮಾಡುತ್ತಾರೆ. ಕಾರಣ ಹಣ್ಣುಗಳ ಬೆಲೆ ಹೆಚ್ಚಾಗಿದೆ.

ನಗರದ ಮಾರುಕಟ್ಟೆಯಲ್ಲಿ ಖರ್ಜೂರ, ಒಣ ಹಣ್ಣು, ಹೂ, ವಿವಿಧ ಬಗೆಯ ಹಣ್ಣು ಹಂಪಲ, ಹಣ್ಣು ಖರೀದಿ ಭರ್ಜರಿಯಾಗಿತ್ತು. ಕಲ್ಲಂಗಡಿ ₹30, ಕರಬೂಜ ₹100 ರಿಂದ 150, ಚಿಕ್ಕು ₹100 ಕೆಜಿ, ಬಾಳೆ ಹಣ್ಣು ₹40 ರಿಂದ 50 ಡಜನ್‌, ದ್ರಾಕ್ಷಿ ₹200 ಕೆಜಿ, ದಾಳಿಂಬೆ ₹250 ಕೆಜಿ, ಮೋಸಂಬಿ, ₹250 ಕೆಜಿ, ಶೇಬು ₹180 ರಿಂದ 220 ಕೆಜಿ, ಖರ್ಜೂರ ₹200 ದರಕ್ಕೆ ಮಾರಾಟವಾದವು. ಸೇವಂತಿಗೆ ಮಾರು ₹60, ಕನಕಾಂಬರ ₹80, ಮಲ್ಲಿಗೆ ₹60 , ಸುಗಂಧಿ ಮಾಲೆ ₹150, ಸೇವಂತಿ ಮಾಲೆ ₹30 ದರವಿತ್ತು. 

ಮೇಡ್ಲೇರಿ ವೃತ್ತದ ಮಲ್ಲಿಕಾರ್ಜುನ ದೇವಸ್ಥಾನ, ವಾಗೀಶನಗರದ ಕಸಾಪ ಭವನದ ಬಳಿ ಇರುವ ನೂರಂದೇಶ್ವರ ದೇವಸ್ಥಾನ, ಹಲಗೇರಿ ರಸ್ತೆಯ ಹೊರಗುಡಿ ಬೀರೇಶ್ವರ ದೇವಸ್ಥಾನದ ಶಿವಮೂರ್ತಿ, ವಿದ್ಯಾನಗರದ ವೀರಭದ್ರ ದೇವಸ್ಥಾನ, ಗಂಗಾಜಲ ತಾಂಡಾದ ಸೇವಾಲಾಲ್‌ ದೇವಸ್ಥಾನ, ವಾಗೀಶನಗರದ ವೀರಭದ್ರದೇವಸ್ಥಾನ, ಕೋಟೆ ವೀರಭದ್ರ ದೇವಸ್ಥಾನ, ವಿನಾಯಕ ನಗರದ ಗಣೇಶ ದೇವಸ್ಥಾನ, ದೊಡ್ಡ ಕೆರೆ ಬಳಿ ಇರುವ ಈಶ್ವರ ದೇವಸ್ಥಾನ, ಸಿದ್ದೇಶ್ವರನಗರದ ಸಿದ್ಧೇಶ್ವರ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ಈಶ್ವರನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಉಮಾಶಂಕರನಗರದ ಪಂಚಮುಖಿ ಆಂಜನೇಯ ದೇವಸ್ಥಾನ, ಗುರು ಕೊಟ್ಟೂರೇಶ್ವರ, ದೊಡ್ಡಪೇಟೆ ಬಸವೇಶ್ವರ, ಹಳೇ ಪಿ.ಬಿ.ರಸ್ತೆಯ ಪಿ ಮತ್ತು ಟಿ ಕ್ವಾಟರ್ಸ್‌ ಬಳಿ ಇರುವ ಈಶ್ವರ ದೇವಸ್ಥಾನ, ಮೃತ್ಯುಂಜಯ ಮಠದ ವೀರಭದ್ರದೇವಸ್ಥಾನ, ಕೋಟೆ ಮೈಲಾರ ಲಿಂಗೇಶ್ವರ ದೇವಸ್ಥಾನ, ಕೋಟೆ ವೀರಭದ್ರೇಶ್ವರ ಹಾಗೂ ಲೆಕ್ಕದೇಶ್ವರ ದೇವರಿಗೆ ಶಿವರಾತ್ರಿ ಆಚರಣೆ ಅಂಗವಾಗಿ ಭಾನುವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಭಜನೆ, ಜಾಗರಣೆ ಕಾರ್ಯಕ್ರಮಗಳು ಜರುಗಲಿವೆ.

ಅಶೋಕ ವೃತ್ತದಲ್ಲಿ ಫೆ.15ರಂದು 6 ಗಂಟೆಗೆ ಜಾನಪದ ಜಾಗರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  

ಹಾವೇರಿ ಮಾರುಕಟ್ಟೆಯಲ್ಲಿ ಜನರು ಶುಕ್ರವಾರ ಹಣ್ಣುಗಳನ್ನು ಖರೀದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.