
ಹಾವೇರಿ: ಜಿಲ್ಲೆಯ ಸವಣೂರ ತಾಲ್ಲೂಕಿನ ಜೇಕಿನಕಟ್ಟಿ ಗ್ರಾಮದ ಉಡಚಮ್ಮದೇವಿಗೆ ನೂತನ ರಥ ನಿರ್ಮಿಸಲಾಗಿದ್ದು, ಇದಕ್ಕಾಗಿ ಗ್ರಾಮದ ಮಹಿಳೆಯರೇ ₹10 ಲಕ್ಷ ದೇಣಿಗೆ ನೀಡಿದ್ದಾರೆ.
ಅ.2ರ ವಿಜಯದಶಮಿ ದಿನದಂದು ರಥ ಲೋಕಾರ್ಪಣೆ ಆಗಲಿದೆ. ಅಂದೇ ಉಡಚಮ್ಮ
ದೇವಿಯ ಭವ್ಯ ರಥೋತ್ಸವ ಜರುಗಲಿದೆ. ರಥವನ್ನು ಮಹಿಳೆಯರು ಮಾತ್ರ ಎಳೆಯುವರು.
ಗ್ರಾಮದ ಹುತ್ತಮಲ್ಲೇಶ್ವರ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ 16 ವರ್ಷಗಳಿಂದ ಗ್ರಾಮದೇವತೆ ಉಡಚಮ್ಮದೇವಿಯ ದೇವಸ್ಥಾನ ಆವರಣದಲ್ಲಿ ದೇವಿಯ ಪುರಾಣ ಪ್ರವಚನ, ಧರ್ಮಜಾಗೃತಿ ಕಾರ್ಯಕ್ರಮ ನಡೆಯುತ್ತದೆ. ರಥೋತ್ಸವ ಇದೇ ಮೊದಲ ಬಾರಿ ನಡೆಯಲಿದೆ.
‘ರಥ ನಿರ್ಮಿಸಲು ಸಮಿತಿಯವರು ತೀರ್ಮಾನಿಸಿದಾಗ, ಗ್ರಾಮದ ನೂರಾರು ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸಾಮರ್ಥ್ಯ ಅನುಸಾರ ದೇಣಿಗೆ ನೀಡಿದರು. ರಥ ನಿರ್ಮಾಣಕ್ಕೆ ₹10 ಲಕ್ಷ ವೆಚ್ಚವಾಗಿದೆ’ ಎಂದು ಸಮಿತಿಯ ಪ್ರಮುಖರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.