ಸಾವು (ಪ್ರಾತಿನಿಧಿಕ ಚಿತ್ರ)
ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಇನಾಂನೀರಲಗಿ ಗ್ರಾಮದಲ್ಲಿ ಜಮೀನಿಗೆ ಅನಧಿಕೃತವಾಗಿಎಳೆದಿದ್ದ ತಂತಿಯಿಂದ ವಿದ್ಯುತ್ ತಗುಲಿ ಅಣ್ಣಪ್ಪ ಕ್ಯಾಸನೂರು ಎಂಬುವವರು ಮೃತಪಟ್ಟಿದ್ದಾರೆ.
‘ಇನಾಂನೀರಲಗಿ ಗ್ರಾಮದ ಅಣ್ಣಪ್ಪ ಅವರು ಮಂಜುನಾಥ ಸಿದ್ದಮ್ಮನವರ ಜೊತೆ ಬುಧವಾರ (ಆ. 27) ಜಮೀನಿಗೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಮಂಜುನಾಥ ಅವರು ಗಾಯಗೊಂಡಿದ್ದಾರೆ. ಅನಧಿಕೃತವಾಗಿ ತಂತಿ ಎಳೆದುಕೊಂಡಿದ್ದ ಆರೋಪಿಗಳಾದ ಪ್ರಭು ಚನ್ನಪ್ಪ ಹಾವೇರಿ ಹಾಗೂ ಅಭಿ ಫಕ್ಕೀರಪ್ಪ ಶಿಗ್ಗಾಂವ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಹಾನಗಲ್ ಠಾಣೆ ಪೊಲೀಸರು ತಿಳಿಸಿದರು.
‘ಗಣಪತಿ ಹಬ್ಬದಂದು ಮೂರ್ತಿ ಪ್ರತಿಷ್ಠಾಪನೆಗಾಗಿ ಮಂಟಪ ಮಾಡಲಾಗಿತ್ತು. ಅಲಂಕಾರಕ್ಕೆ ಮಾವಿನ ತೋರಣ, ಮೆಕ್ಕೆಜೋಳದ ತೆನೆ, ಬಾಳೆ ದಿಂಡು ತರಲೆಂದು ಅಣ್ಣಪ್ಪ ಅವರು ಜಮೀನಿಗೆ ತೆರಳಿದ್ದರು.’
‘ಆರೋಪಿಗಳಾದ ಪ್ರಭು ಹಾಗೂ ಅಭಿ, ತಮ್ಮ ಜಮೀನಿಗೆ ಟ್ರಾನ್ಸ್‌ಫಾರ್ಮರ್‌ನಿಂದ ಅನಧಿಕೃತವಾಗಿ ವಿದ್ಯುತ್ ತಂತಿ ಎಳೆದುಕೊಂಡಿದ್ದರು. ಕಾಡು ಪ್ರಾಣಿಗಳು ಬರದಂತೆ ವಿದ್ಯುತ್ ತಂತಿಯನ್ನು ಕಂಬಗಳಿಗೆ ಕಟ್ಟಿದ್ದರು. ಇದೇ ಸ್ಥಳದಲ್ಲಿ ವಿದ್ಯುತ್ ತಗುಲಿ ಅಣ್ಣಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ಮಂಜುನಾಥ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹೇಳಿದರು.
‘ನಾಗಪ್ಪ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಅವರನ್ನು ಹಾವೇರಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ–ಆರ್‌ಐ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಅವರು ತೀರಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.