ADVERTISEMENT

ಹಾವೇರಿ | ದೇವಸ್ಥಾನ ಪ್ರವೇಶ ನಿರ್ಬಂಧ: ಪೊಲೀಸರು-ಭಕ್ತರ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 9:31 IST
Last Updated 30 ಆಗಸ್ಟ್ 2024, 9:31 IST
<div class="paragraphs"><p>ಹಾವೇರಿ ಜಿಲ್ಲೆಯ ದೇವರಗುಡ್ಡದಲ್ಲಿರುವ ಮಾಲತೇಶ ದೇವಸ್ಥಾನದೊಳಗೆ ಬಿಡುವಂತೆ ಭಕ್ತರು, ಪೊಲೀಸರ ಜೊತೆ ವಾಗ್ವಾದ&nbsp;ನಡೆಸಿದರು</p><p></p></div>

ಹಾವೇರಿ ಜಿಲ್ಲೆಯ ದೇವರಗುಡ್ಡದಲ್ಲಿರುವ ಮಾಲತೇಶ ದೇವಸ್ಥಾನದೊಳಗೆ ಬಿಡುವಂತೆ ಭಕ್ತರು, ಪೊಲೀಸರ ಜೊತೆ ವಾಗ್ವಾದ ನಡೆಸಿದರು

   

ಹಾವೇರಿ: ಜಿಲ್ಲೆಯ ಸುಕ್ಷೇತ್ರ ದೇವರಗುಡ್ಡದಲ್ಲಿರುವ ಮಾಲತೇಶ ದೇವರ ದೇವಸ್ಥಾನಕ್ಕೆ ಸಂಜೆಯವರೆಗೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದಿರುವ ಭಕ್ತರು ದೇವರ ದರ್ಶನಕ್ಕಾಗಿ ಕಾದು ಕುಳಿತಿದ್ದಾರೆ.

ADVERTISEMENT

ದೇವಸ್ಥಾನ ಬಳಿಯ ದ್ವಾರಬಾಗಿಲು ಸೇರಿರುವ ಭಕ್ತರು, 'ನಮ್ಮನ್ನು ದೇವಸ್ಥಾನದ ಒಳಗೆ ಬಿಡಿ. ಮಾಲತೇಶ ದೇವರ ದರ್ಶನ ಪಡೆಯುತ್ತೇವೆ. ನಂತರ, ಮೈಲಾರಕ್ಕೆ ಹೋಗಬೇಕು' ಎಂದು ಕೋರುತ್ತಿದ್ದಾರೆ.

'ಒಳಗೆ ಬಿಡಲು ಆಗುವುದಿಲ್ಲ' ಎನ್ನುತ್ತಿರುವ ಪೊಲೀಸರು, 'ಸಿದ್ದರಾಮಯ್ಯ ಅವರು ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಬರುತ್ತಿದ್ದಾರೆ. ಅವರು ಬಂದು ಹೋಗುವವರೆಗೂ ಯಾರನ್ನೂ ಬಿಡುವುದಿಲ್ಲ' ಎಂದರು.

ಇದರಿಂದ ಸಿಟ್ಟಾದ ಭಕ್ತರು, 'ನಮ್ಮಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಬರುವುದು ಇನ್ನು ತಡವಾಗಲಿದೆ. ಅವರು ಬರುವುದಕ್ಕೂ 5 ನಿಮಿಷ ಮುನ್ನ ಬೇಕಾದರೆ ದೇವಸ್ಥಾನ ಬಂದ್ ಮಾಡಿ. ಈಗ ಒಳಗೆ ಬಿಡಿ' ಎಂದು ಪುನಃ ಕೋರಿದರು.

ಇದೇ ಸಂದರ್ಭದಲ್ಲಿ ಭಕ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.

'ಭಕ್ತರನ್ನು ಅಕ್ರಮವಾಗಿ ತಡೆಗಟ್ಟಿರುವ ಪೊಲೀಸರು, ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಭಕ್ತರು ಹೇಳಿದರು.

ನೈವೇದ್ಯ ಮಾಡಲು ಆಹಾರ ತಯಾರಿಕೆ: ದೇವರಗುಡ್ಡಕ್ಕೆ ಬಂದಿರುವ ಭಕ್ತರು, ದೇವರಿಗೆ ನೈವೈದ್ಯ ಮಾಡಲು ಆಹಾರ ಸಿದ್ದಪಡಿಸಿ, ದೇವರಿಗೆ ಅರ್ಪಿಸಲು ಕಾಯುತ್ತಿದ್ದಾರೆ. ಆದರೆ, ಪೊಲೀಸರು ಅವರನ್ನು ಒಳಗೆ ಬಿಡುತ್ತಿಲ್ಲ.

'ಮುಖ್ಯಮಂತ್ರಿ ಬರುವುದಕ್ಕೂ ಮುನ್ನ 5 ನಿಮಿಷ ಮಾತ್ರ ದೇವಸ್ಥಾನ ಬಂದ್ ಮಾಡಿ. ಈಗ ದೇವಸ್ಥಾನಕ್ಕೆ‌ ಹೋಗಲು ಅವಕಾಶ ನೀಡಿ. ನೈವೇದ್ಯ ಮಾಡುತ್ತೇವೆ' ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.