ಬ್ಯಾಡಗಿ: ‘ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ಪಟ್ಟಣದ ಮುಖ್ಯರಸ್ತೆಯ ಮೂಲಕ ಹಾಯ್ದು ಹೋಗಿದ್ದರಿಂದ ರಸ್ತೆ ವಿಸ್ತರಣೆಗೆ ವಿರೋಧಿಸಿ ಆಸ್ತಿ ಮಾಲಿಕರು ಧಾರವಾಡ ಹೈಕೋರ್ಟ್‌ನಲ್ಲಿ ಹಾಕಿದ್ದ ಪ್ರಕರಣವನ್ನು ಯಾವುದೇ ಷರತ್ತು ಇಲ್ಲದೆ ವಾಪಸ್ ಪಡೆದುಕೊಂಡಿರುವುದು ಒಂದು ಐತಿಹಾಸಿಕ ನಿಲುವಾಗಿದೆ’ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದ ಅವರು,
‘ಕಳೆದ 14 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಕರಣಕ್ಕೆ ಈಗ ಮುಕ್ತಿ ಸಿಕ್ಕಿದೆ. ಇಲ್ಲಿಯ ಜನರ ಭಾವನೆಗಳಿಗೆ ಮುಖ್ಯರಸ್ತೆಯ ಆಸ್ತಿ ಮಾಲೀಕರು ಸ್ಪಂದಿಸಿದ್ದಾರೆ’ ಎಂದರು.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ‘ಮುಖ್ಯ ರಸ್ತೆಯ ಆಸ್ತಿ ಮಾಲೀಕರು ಮನಸ್ಸನ್ನು ಪರಿವರ್ತನೆ ಮಾಡಿಕೊಂಡಿದ್ದರಿಂದ ಮುಖ್ಯರಸ್ತೆ ವಿಸ್ತರಣೆಗೆ ಹಾದಿ ಸುಗಮವಾಗಿದೆ. ಪ್ರಸ್ತುತ ಸರ್ಕಾರ ತಮ್ಮ ಜೊತೆಗಿದ್ದು, ಮುಂದಿನ ಕಾರ್ಯ ಸಲೀಸಾಗಿ ನಡೆಯಲಿದೆ’ ಎಂದರು.
ವರ್ತಕರಾದ ಬಿ.ಎಂ. ಛತ್ರದ, ವಿ.ಎಸ್. ಮೋರಿಗೇರಿ, ಸುರೇಶ ಮೇಲಗಿರಿ, ಮಲ್ಲಣ್ಣ ಹುಚ್ಚಗೊಂಡರ, ಉದ್ಯಮಿ ವಿ.ವಿ. ಹಿರೇಮಠ, ಮುಖ್ಯರಸ್ತೆ ಆಸ್ತಿ ಮಾಲೀಕರಾದ ಅಶೋಕ ಜೈನ್, ಪ್ರದೀಪ ಸದ್ದಲಗಿ, ಅಂಬಾಲಾಲ್ ಜೈನ್, ಆನಂದ ಜೈನ್, ಮುಖಂಡರಾದ ಚನ್ನಬಸಪ್ಪ ಹುಲ್ಲತ್ತಿ, ದಾನಪ್ಪ ಚೂರಿ, ಚಿಕ್ಕಪ್ಪ ಛತ್ರದ, ಸುರೇಶ ಛಲವಾದಿ, ಎಂ.ಎಲ್. ಕಿರಣಕುಮಾರ, ಬಸವರಾಜ ಸಂಕಣ್ಣನವರ, ದುರ್ಗೇಶ ಗೋಣೆಮ್ಮನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.