
ಹಿರೇಕೆರೂರ: ‘ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ನಡೆಯುವ ಶ್ರಮದಾನ ಹಾಗೂ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ಪ್ರಚಲಿತ ವಿದ್ಯಮಾನ ಹಾಗೂ ನಾಯಕತ್ವ ಗುಣ ಬೆಳೆಸುವಲ್ಲಿ ಸಹಕಾರಿ’ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ತಾಲ್ಲೂಕಿನ ನೂಲಗೇರಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ರಾಷ್ಟೀಯ ಸೇವಾ ಯೋಜನಾ ಕಾರ್ಯಕ್ರಮವು ಸದೃಡ ಭಾರತ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಹಾಗೂ ನಾಯಕತ್ವ ಗುಣ ಬೆಳೆಸುತ್ತವೆ’ ಎಂದರು.
ಮೇಘರಾಜ ಎಸ್.ಎಂ, ಮಹೇಶ ಕೆರೂರ, ಮಂಜುನಾಥ ಚಲವಾದಿ, ಈ.ಚಂ. ದಳವಾಯಿ, ಅಶೋಕ ಮಳ್ತಳ್ಳಿ, ಆರ್.ಎಂ. ಕರೇಗೌಡ್ರ, ಗಣೇಶಪು ಚಲವಾದಿ, ರಾಜಪ್ಪ ಬಂಗೇರ, ಬಿದ್ದಾಡಯ್ಯ ಮುಳಗುಂದಮಠ, ಪ್ರಾಚಾರ್ಯ ನಾನಾಸಾಹೇಬ ಎಸ್. ಹಚ್ಚಡದ, ಕಿರಣ ಉಪ್ಪಾರ, ಪ್ರವೀಣ ಅಂಗಡಿ, ಶಶಿಕುಮಾರ ಕಡೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.