
ಹಿರೇಕೆರೂರು: ‘ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕಾಂಪೌಂಡ್ ಬಿದ್ದು ಹಾಳಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ ಬಾರ್ಕಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಕರವೇ ತಾಲ್ಲೂಕು ಘಟಕದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಂಗಳವಾರ ಪ್ರತಿಭಟಿಸಿ ತಹಶೀಲ್ದಾರ್ ಎಂ. ರೇಣುಕಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
‘ಕೆಲವು ಅಂಗಡಿಗಳ ನಾಮಫಲಕದಲ್ಲಿ ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಸಭೆ, ಸಮಾರಂಭ, ಹಬ್ಬದ ಸಂದರ್ಭದಲ್ಲಿ ಹಾಕುವ ಬ್ಯಾನರ್‌ಗಳಲ್ಲೂ ನಿಯಮ ಪಾಲಿಸಬೇಕು’ ಎಂದು ಹೇಳಿದರು.
‘ಪಟ್ಟಣದ ಬಸ್ ನಿಲ್ದಾಣಕ್ಕೆ ವರಕವಿ ಸರ್ವಜ್ಞ ಬಸ್ ನಿಲ್ದಾಣ ಎಂದು ನಾಮಕರಣ ಮಾಡಬೇಕು ಮತ್ತು ಜನಸಂಖ್ಯೆ ಆಧಾರದ ಮೇಲೆ ಬೇರೆ ಕಡೆ ಬಸ್ ನಿಲ್ದಾಣವನ್ನು ನಿರ್ಮಾಣ ಕಾರ್ಯವಾಗಬೇಕು’ ಎಂದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ಪೂಜಾರ, ಅಬ್ಬು ಕೋಡಮಗ್ಗಿ, ಕರಿಯಪ್ಪ ಕೊರವರ, ಯಲ್ಲಪ್ಪ ಕಟೆಕರ, ಬಿ.ಎಚ್. ಬಣಕಾರ, ರವಿ ಬನ್ನಿಹಟ್ಟಿ, ರಾಮನಗೌಡ ಪಾಟೀಲ, ಅಶೋಕ ಬಾವಾಪುರ, ರವಿ ಲಮಾಣಿ ಚನ್ನಳ್ಳಿ, ಅಶೋಕ ಮಡಿವಾಳ, ಜಾಫರಸಾಬ್, ಚಂದ್ರಕಾಂತ ಲಮಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.