ADVERTISEMENT

ಹುರಳಿಕುಪ್ಪಿ: ಮಾರುತಿ ಮೂರ್ತಿ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 15:41 IST
Last Updated 9 ಆಗಸ್ಟ್ 2024, 15:41 IST
ಸವಣೂರ ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿರುವ ಮಾರುತಿ ದೇವಸ್ಥಾನದ ಮೂರ್ತಿ ಸ್ಥಳಾಂತರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ವಿಮಲ ರೇಣುಕ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು
ಸವಣೂರ ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿರುವ ಮಾರುತಿ ದೇವಸ್ಥಾನದ ಮೂರ್ತಿ ಸ್ಥಳಾಂತರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ವಿಮಲ ರೇಣುಕ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು   

ಹಾವೇರಿ: ಸವಣೂರ ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿರುವ ಮಾರುತಿ ದೇವಸ್ಥಾನದ ಮೂರ್ತಿ ಸ್ಥಳಾಂತರ ಕಾರ್ಯಕ್ರಮ ಇತ್ತೀಚೆಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಮೂರ್ತಿ ಸ್ಥಳಾಂತರ ನಿಮಿತ್ತ ಬೆಳಿಗ್ಗೆ 7 ಘಂಟೆಗೆ ವೀರಯ್ಯ ಶಾಸ್ತ್ರಿ ಹಿರೇಮಠ ಅವರು ಕುಂಕುಮ ಪೂಜೆ ಹಾಗೂ ರುದ್ರಾಭಿಷೇಕ ಮಹಾ ಪೂಜೆ ನೆರವೇರಿಸಿದರು.

ವಿಮಲ ರೇಣುಕ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ ಅವರು ಮಾರುತಿ ಮೂರ್ತಿ ಸ್ಥಳಾಂತರಿಸಲು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ADVERTISEMENT

’ಮಾರುತಿ ದೇವಸ್ಥಾನ ನಿರ್ಮಾಣ ಕೆಲಸ ಆರಂಭವಾಗಿದೆ. ಈ ಮೊದಲ ಗದ್ದುಗೆಯಲ್ಲಿದ್ದ ಮೂರ್ತಿಯನ್ನು ಸ್ವಲ್ಪ ದೂರದಲ್ಲಿರುವ ಹೊಸ ಗದ್ದುಗೆಗೆ ಸ್ಥಳಾಂತರಿಸಲಾಗಿದೆ. ಇದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ ಎಂದು ಗ್ರಾಮಸ್ಥರು ಹೇಳಿದರು.

ದ್ಯಾಮನಗೌಡ ಪಾಟೀಲ, ಉಡಚಪ್ಪ ದೊಡ್ಡ ಉಡಚಪ್ಪನವರ, ವಿ.ಎಂ. ಹೊಸಳ್ಳಿ, ಡಿ.ಯು. ಅಜ್ಜಣ್ಣವರ, ಶೇಖಪ್ಪ ಕಲಕೋಟಿ, ಅಶೋಕ ಯಲಿಗಾರ, ಐ.ಎಸ್. ಪಾಟೀಲ, ಬಸವರಾಜ ಇಂಗಳಗಿ, ಆನಂದ ಬಡಿಗೇರ, ಭರಮಪ್ಪ ಕಲಾದಗಿ, ಮಾರುತಿ ದೊಡ್ಡಮನಿ, ಮಾಲತೇಶ ಪೂಜಾರ, ಫಕ್ಕಿರೇಶ ಪೂಜಾರ, ಮುದಕಪ್ಪ ಹೊಸಳ್ಳಿ, ನೀಲಪ್ಪ ನೀಲಪ್ಪನವರ, ಮುತ್ತಪ್ಪ ಪೂಜಾರ, ಈರಣ್ಣ ದೇಸೂರ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.