ಸಾಂದರ್ಭಿಕ ಚಿತ್ರ
ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹೇರೂರು ಗ್ರಾಮದ ಎಗ್‌ರೈಸ್ ಅಂಗಡಿ ಮೇಲೆ ಪೊಲೀಸರು ದಾಳಿ ಮಾಡಿದ್ದು, ಅಕ್ರಮವಾಗಿ ಮಾರುತ್ತಿದ್ದ ಮದ್ಯವನ್ನು ಜಪ್ತಿ ಮಾಡಿದ್ದಾರೆ.
‘ಹೇರೂರು ನಿವಾಸಿ ಮಾಲತೇಶ ವೀರಭದ್ರಪ್ಪ ಆದಣ್ಣನವರ ತಮ್ಮ ಎಗ್‌ರೈಸ್ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಶುಕ್ರವಾರ ಅಂಗಡಿ ಮೇಲೆ ದಾಳಿ ಮಾಡಲಾಗಿದೆ’ ಎಂದು ಆಡೂರು ಠಾಣೆ ಪೊಲೀಸರು ತಿಳಿಸಿದರು.
‘ಅಂಗಡಿಯಲ್ಲಿ 90 ಎಂ.ಎಲ್.ನ 22 ಮದ್ಯದ ಪೌಚ್‌ಗಳು, 4 ಖಾಲಿ ಪೌಚ್‌ಗಳು, 2 ಪ್ಲಾಸ್ಟಿಕ್ ಗ್ಲಾಸ್‌ಗಳು ಸಿಕ್ಕಿವೆ’ ಎಂದರು.
ಹಂಸಬಾವಿ: ಹಿರೇಕೆರೂರು ತಾಲ್ಲೂಕಿನ ಲಿಂಗದೇವರಕೊಪ್ಪ ಗ್ರಾಮದ ಬಳಿ ಅನ್ನಪೂರ್ಣೇಶ್ವರಿ ಎಗ್‌ರೈಸ್ ಅಂಗಡಿ ಮೇಲೆ ಹಂಸಬಾವಿ ಪೊಲೀಸರು ದಾಳಿ ಮಾಡಿದ್ದು, ಅಕ್ರಮವಾಗಿ ಮಾರುತ್ತಿದ್ದ ಮದ್ಯ ಜಪ್ತಿ ಮಾಡಿದ್ದಾರೆ.
‘ಬ್ಯಾಡಗಿ ತಾಲ್ಲೂಕಿನ ಬಿಸಲಹಳ್ಳಿ ಗ್ರಾಮದ ಫಕ್ಕೀರಪ್ಪ ಕರಿಯಪ್ಪ ಓಲೇಕಾರ ಎಂಬಾತ ತನ್ನ ಎಗ್‌ರೈಸ್ ಅಂಗಡಿಯಲ್ಲಿ ಮದ್ಯ ಮಾರುತ್ತಿದ್ದ. ಈತನಿಂದ 90 ಎಂ.ಎಲ್.ನ 11 ಪೌಚ್, 5 ಖಾಲಿ ಪೌಚ್, 5 ಖಾಲಿ ಪ್ಲಾಸ್ಟಿಕ್ ಕಪ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.