ADVERTISEMENT

ಧರ್ಮ ಉಳಿವಿಗೆ ಪ್ರಯತ್ನ ಅಗತ್ಯ: ಜಗದೀಶ ಕಾರಂತ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:05 IST
Last Updated 10 ಫೆಬ್ರುವರಿ 2026, 6:05 IST
ಬ್ಯಾಡಗಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮಾವೇಶದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ಮಾತನಾಡಿದರು 
ಬ್ಯಾಡಗಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮಾವೇಶದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ಮಾತನಾಡಿದರು    

ಪ್ರಜಾವಾಣಿ ವಾರ್ತೆ

ಬ್ಯಾಡಗಿ: ‘ಹಿಂದೂ ಧರ್ಮ ಹಾಗೂ ಸಂಸ್ಕತಿಯ ಉಳವಿಗಾಗಿ ಯುವಕರ ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ’ ಎಂದು ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ಅಭಿಪ್ರಾಯ ಪಟ್ಟರು.

ಪಟ್ಟಣದ ಎಸ್‌ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ವಿರಾಟ ಹಿಂದೂ ಸಮಾವೇಶ’ ದಲ್ಲಿ ಮಾತನಾಡಿದರು.

ADVERTISEMENT

‘ಹಿಂದೂಗಳಲ್ಲಿ ಮೊದಲು ರಾಷ್ಟ್ರ ಹಾಗೂ ಧರ್ಮ ಅಭಿಮಾನ ಮೆರೆಯಬೇಕು. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಇಂದಿನ ಯುವ ಪೀಳಿಗೆ ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ’ ಎಂದರು. 

ಸಾನ್ನಿಧ್ಯ ವಹಿಸಿದ ಮುಪ್ಪಿನೇಶ್ವರ ವಿಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಸನಾತನ ಹಿಂದೂ ಧರ್ಮ ಪಾಲನೆಯಾದರೆ ಭಾರತ ಭದ್ರವಾಗಲಿದೆ’ ಎಂದರು.

ಹಿಂದೂ ಸಮ್ಮೇಳನ ಸಮಿತಿ ತಾಲ್ಲೂಕು ಅಧ್ಯಕ್ಷ ಜಯಣ್ಣ ಶಿರೂರ  ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯ ರಾಚಯ್ಯನವರು ಓದಿಸೋಮಠ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.