
ಪ್ರಜಾವಾಣಿ ವಾರ್ತೆ
ಹಾನಗಲ್: ಸಂಗೀತ ಮತ್ತು ರಂಗಭೂಮಿ ವಿಭಾಗದಲ್ಲಿ ಸಾಧನೆಗಾಗಿ ತಾಲ್ಲೂಕಿನ ಕಾಲ್ವೆಕಲ್ಲಾಪುರ ಗ್ರಾಮದ ಹಿರಿಯ ರಂಗಕರ್ಮಿ ಮಧುಕುಮಾರ ಹರಿಜನ ಅವರು ಈ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಾಲ್ಯದಿಂದಲೇ ರಂಗ ಕಲೆಯತ್ತ ಆಕರ್ಷಿತಗೊಂಡ ಮಧುಕುಮಾರ ರಂಗಭೂಮಿಯ ಹಿನ್ನೆಲೆ ಸಂಗೀತ ಮತ್ತು ಚನ್ನಪ್ಪ ಚನ್ನಗೌಡ ಪಾತ್ರದಿಂದ ಈ ಭಾಗದಲ್ಲಿ ಪ್ರಚಲಿತ ಪಡೆದವರು.
ವಿವಿಧ ವಾದ್ಯ ನುಡಿಸುವ ನೈಪುಣ್ಯತೆ ಪಡೆದಿರುವ ಇವರು ಸ್ಥಳೀಯ ಹವ್ಯಾಸಿ ರಂಗ ಕಲಾವಿದರಿಗೆ ತರಬೇತಿ ನೀಡುತ್ತಾರೆ. ಈತನಕ 200 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಹಲವಾರು ವರ್ಷಗಳಿಂದ ‘ಮಧುಕುಮಾರ ಸಂಗೀತ ಕಲಾ ಬಳಗ’ ಸ್ಥಾಪಿಸಿ ಆಸಕ್ತ ಕಲಾವಿದರಿಗೆ ವೇದಿಕೆ ಒದಗಿಸುತ್ತಿದ್ದಾರೆ.