ADVERTISEMENT

ಸವಣೂರು | ಸಿಗದ ವರ್ಗಾವಣೆ: ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 19:11 IST
Last Updated 22 ಫೆಬ್ರುವರಿ 2026, 19:11 IST
ಮಹದೇವಪ್ಪ ಪಕೀರಪ್ಪ ಎರೇಸೀಮಿ 
ಮಹದೇವಪ್ಪ ಪಕೀರಪ್ಪ ಎರೇಸೀಮಿ    

ಸವಣೂರು (ಹಾವೇರಿ ಜಿಲ್ಲೆ): ಕೆಎಸ್‌ಆರ್‌ಟಿಸಿ ನೌಕರ ಮಹದೇವಪ್ಪ ಪಕೀರಪ್ಪ ಎರೇಸೀಮಿ (49) ಭಾನುವಾರ ಇಲ್ಲಿನ ಬಸ್‌ನಿಲ್ದಾಣದ ಆವರಣದ ಇಂಧನ ಶಾಖೆಯ ಕೊಠಡಿಯಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾವೇರಿ ವಿಭಾಗೀಯ ಉಪಾಧ್ಯಕ್ಷ, ಸವಣೂರ ಬಸ್ ಘಟಕದ ಚಾಲಕ ಬೋಧಕರಾಗಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಅಧಿಕಾರಿಗಳ ಸೂಚನೆಯಂತೆ ನಿಗಮದ ಇಂಧನ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

‘ಮಕ್ಕಳ ಶಿಕ್ಷಣಕ್ಕೆ ಹಣಕಾಸಿನ ತೊಂದರೆಯಿತ್ತು. ಚಾಲಕರ ಹುದ್ದೆಗೆ ವರ್ಗಾವಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ‘ನಿಗಮದ ಇಂಧನ ಶಾಖೆಯಲ್ಲಿಯೇ ಮುಂದುವರೆಯಬೇಕು’ ಎಂದು ಅಧಿಕಾರಿಗಳು ಸೂಚಿಸಿದ್ದರು. ಇದರಿಂದ ಮನನೊಂದಿದ್ದರು’ ಎಂದು ಮಹದೇವಪ್ಪ ಅವರ ಪತ್ನಿ ಲಕ್ಷ್ಮೀ ಮಹದೇವಪ್ಪ ಎರೇಸೀಮಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.