
ಹಾನಗಲ್: ಹಾನಗಲ್ ಲಿಂ.ಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ಮೂರು ದಿನಗಳ ಅನ್ನದಾಸೋಹಕ್ಕಾಗಿ ರೊಟ್ಟಿ, ಖರ್ಚಿಕಾಯಿಗಳನ್ನು ತಾಲ್ಲೂಕಿನ ಸಾಂವಸಗಿ ಭಕ್ತರು ಇಲ್ಲಿನ ಕುಮಾರಸ್ವಾಮಿ ವಿರಕ್ತಮಠಕ್ಕೆ ಸಮರ್ಪಿಸಿದರು.
ಹಾನಗಲ್ ವಿರಕ್ತಮಠ ಆವರಣದಲ್ಲಿ ಶುಕ್ರವಾರದಿಂದ ಭಾನುವಾರ ತನಕ ಪುಣ್ಯಸ್ಮರಣೆ ಆಚರಣೆ ನಡೆಯಲಿದೆ. ಸಾಂವಸಗಿ ಗ್ರಾಮದ ವೀರಭದ್ರೇಶ್ವರ ಸೇವಾ ಸಮಿತಿ ವತಿಯಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಬುಧವಾರ ಸಂಜೆ ಎರಡು ಟ್ರ್ಯಾಕ್ಟರ್‌ಗಳಲ್ಲಿ ರೊಟ್ಟಿ ಮತ್ತು ಖರ್ಚಿಕಾಯಿ ತರಲಾಯಿತು.
ಸಾಂವಸಗಿ ಗ್ರಾಮದ ಭಕ್ತರ ವತಿಯಿಂದ 5 ಸಾವಿರ ರೊಟ್ಟಿ ಮತ್ತು 5 ಸಾವಿರ ಖರ್ಚಿಕಾಯಿಗಳನ್ನು ಮಠದ ಅನ್ನದಾಸೋಹಕ್ಕೆ ಗೌರವಪೂರ್ಣವಾಗಿ ಸಮರ್ಪಿಸಲಾಗಿದೆ ಎಂದು ಸಾಂವಸಗಿ ವೀರಭದ್ರೇಶ್ವರ ಸೇವಾ ಸಮಿತಿಯ ಸಂಗಯ್ಯಶಾಸ್ತ್ರಿ ಹಿರೇಮಠ ತಿಳಿಸಿದರು.
ಸಮಿತಿಯ ನಾರಾಯಣೆಪ್ಪ ಬಡಿಗೇರ, ಶಾಂತಪ್ಪ ದೊಡ್ಡಮನಿ, ಯಲ್ಲಪ್ಪ ಚಂದ್ರಗೇರಿ, ಸುಭಾಸ ಮೂಡೂರ ಇದ್ದರು.
ಇಷ್ಟಲಿಂಗ ಪೂಜೆ: ಕುಮಾರೇಶನ ಪುಣ್ಯಸ್ಮರಣೆ ಮುನ್ನಾದಿನವಾದ ಗುರುವಾರ ಮಠದ ಆವರಣದ ಮಂಗಲ ಭವನದಲ್ಲಿ ಬೆಳಿಗ್ಗೆ ಭಕ್ತರು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.
150 ಭಕ್ತರು ಲಿಂಗ ಪೂಜೆಯಲ್ಲಿ ತೊಡಗಿದ್ದರು. ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದರು. ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಂಘಟಕರಾದ ಬಿ.ಎಸ್. ಅಕ್ಕಿವಳ್ಳಿ, ನಾಗಪ್ಪ ಸವದತ್ತಿ, ಕಲ್ಯಾಣಕುಮಾರ ಶೆಟ್ಟರ, ಕುಮಾರ ಹತ್ತಿಕಾಳ, ಶಿವಯೋಗಿ ಸವದತ್ತಿ, ಗಣೇಶ ಮಡಿವಾಳರ, ಶಿವಯೋಗಿ ಅರಳಲೇಮಠ, ಬಸಣ್ಣ ಎಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.