
ಪ್ರಜಾವಾಣಿ ವಾರ್ತೆ
ತಡಸ: ಸಮೀಪದ ಚಿಕ್ಕ ಬೆಂಡಿಗೇರಿ ಗ್ರಾಮದಲ್ಲಿ ಭಾನುವಾರ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವ ನೆರವೇರಿಸಲಾಯಿತು.
ಬೆಳಿಗ್ಗೆ ಮೈಲಾರ ಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಕಂರ್ಯಗಳು ನಡೆದ ಬಳಿಕ ಗ್ರಾಮದ ಬೀದಿಗಳಲ್ಲಿ ಕಕ್ಕಡಾರತಿ ಮೆರವಣಿಗೆ, ಹಾರಿ ಪವಾಡ, ತಂತಿ ಪವಾಡ, ದಾರದ ಪವಾಡ ಹಾಗೂ ಸರಪಳಿ ಪವಾಡ ಕಾರ್ಯಕ್ರಮ ಅದ್ದೂರುಯಾಗಿ ನಡೆದವು.
ಈ ವೇಳೆ ಸಂತೋಷ ಕುಮಾರ ಸ್ವಾಮಿಜಿ, ಶಿವಾನಂದ ಮ್ಯಾಗೇರಿ, ಉಮೇಶ ಬೆನಕನಹಳ್ಳಿ, ಚಂಬಣ್ಣ ಮ್ಯಾಗೇರಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.