
ರಾಣೆಬೆನ್ನೂರು: ತಾಲ್ಲೂಕಿನ ಹೂಲಿಹಳ್ಳಿ- ಕೂನಬೇವು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಎಪಿಎಂಸಿ ಮೆಗಾ ಮಾರುಕಟ್ಟೆಯ ಮೆಕ್ಕೆಜೋಳ ಖರೀದಿ ಕೇಂದ್ರದ ಎದುರಿನ ಮುಖ್ಯದ್ವಾರ ಬಂದ್ ಮಾಡಿ ಮೆಕ್ಕೆಜೋಳ ತಂದ ರೈತರು ಗುರುವಾರ ಪ್ರತಿಭಟನೆ ನಡೆಸಿದರು.
ರೈತರು ಗುಣಮಟ್ಟದ ಮೆಕ್ಕೆಜೋಳವನ್ನು ಖರೀದಿ ಕೇಂದ್ರಕ್ಕೆ ತಂದರೂ ಮೆಕ್ಕೆಜೋಳದ ಗುಣಮಟ್ಟ ಸರಿಯಿಲ್ಲ.ಮೆಕ್ಕೆಜೋಳವನ್ನು ಒಣಗಿಸಿಕೊಂಡು ಬನ್ನಿ ಎಂದು ರೈತರನ್ನು ಮಾಲು ಸಮೇತ ವಾಪಸ್ಸು ಕಳುಹಿಸುತ್ತಿದ್ದಾರೆ. ಎಪಿಎಂಸಿ ಒಳಗೆ ಟ್ರ್ಯಾಕ್ಟರ್, ಲಾರಿ, ಮಿನಿ ಗಾಡಿಯಲ್ಲಿ ತಂದು ಸರದಿಯಲ್ಲಿ ನಿಂತಿದ್ದಾರೆ. ಎಲ್ಲ ಗಾಡಿಯ ಮೆಕ್ಕೆಜೋಳವನ್ನು ತೇವಾಂಶ ಪರಿಶೀಲನೆ ಮಾಡಿಲ್ಲ. ಗೇಟ್ ಒಳಗಡೆ ಗಾಡಿ ಬಿಡುವಾಗ ತೇವಾಂಶ ಪರಿಶೀಲಿಸಿ ಕಳುಹಿಸಬೇಕಿತ್ತು ಎಂದು ಪ್ರತಿಭಟನಾಕಾರರು ದೂರಿದರು.
ಗುಣಮಟ್ಟದ ಮೆಕ್ಕೆಜೋಳ ತಂದರೂ ಗುಣಮಟ್ಟದ ಮೆಕ್ಕೆಜೋಳ ಇದ್ದರೂ ಮಾಲ್ ರಿಜೆಕ್ಟ್ ಮಾಡುತ್ತಿದ್ದಾರೆ. ತಮಗೆ ಬೇಕಾದವರಿದ್ದರೆ ಮಾತ್ರ ₹ 2400 ಕ್ವಿಂಟಲ್ ಖರೀದಿ ಮಾಡಲಾಗುತ್ತದೆ ಎಂದರು.
ಕೆಎಂಎಫ್‌ನವರು ತಮ್ಮ ನಿಯಮದ ಪ್ರಕಾರ ಮೆಕ್ಕೆಜೋಳ ಖರೀದಿ ಮಾಡುತ್ತಾರೆ. ಶೇ 12 ರಿಂದ 14 ತೇವಾಂಶ ಇರಬೇಕು. ಇದಕ್ಕಿಂತ ಹೆಚ್ಚು ಇದ್ದರೆ ತೆಗೆದುಕೊಳ್ಳುವುದಿಲ್ಲ. ನಮ್ಮ ಎಪಿಎಂಸಿಯಲ್ಲಿ ತೇವಾಂಶ ಚೆಕ್ ಮಾಡಿಕೊಡುತ್ತೇವೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿವಳಿಕೆ ಹೇಳಿದಾಗ ಪ್ರತಿಭಟನೆ ವಾಪಸ್ಸು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.