
ಮದುವೆ (ಪ್ರಾತಿನಿಧಿಕ ಚಿತ್ರ)
(ಐಸ್ಟೋಕ್ ಚಿತ್ರ)
ಬ್ಯಾಡಗಿ: ಪಟ್ಟಣದ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಸ್ಥಾನಗಳ 71ನೇ ಜಾತ್ರಾ ಮಹೋತ್ಸವದ ಅಂಗವಾಗಿ ಜ.28 ರಂದು ಸರ್ವ ಧರ್ಮ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗಿದೆ.
ವಿವಾಹವಾಗಲು ಬಯಸುವ ವಧು–ವರರು ಜ.15ರೊಳಗೆ ಸೂಕ್ತ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ 9448150160. 9448630647 ಹಾಗೂ 9448337111 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜ.23ರಂದು ಸಂಜೆ 4 ಗಂಟೆಗೆ ಜಿಲ್ಲಾಮಟ್ಟದ ಸಂಗೀತ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಚಲನ ಚಿತ್ರ ವಿಭಾಗ ನೃತ್ಯ ಮತ್ತು ಭಾವಗೀತೆ, ಭಕ್ತಿಗೀತೆ, ಜಾನಪದ, ಯಕ್ಷಗಾನ, ಭರತ ನಾಟ್ಯ, ಕೋಲಾಟ ವಿಭಾಗದಲ್ಲಿ ವಿಜೇತರಿಗೆ ತಲಾ ಪ್ರಥಮ ನಗದು ಬಹುಮಾನ ₹5ಸಾವಿರ, ದ್ವಿತೀಯ ಬಹುಮಾನ ₹3ಸಾವಿರ ಮತ್ತು ತೃತೀಯ ಬಹುಮಾನ ₹2ಸಾವಿರ ನೀಡಲಾಗುವುದು. ಭಾಗವಹಿಸುವವರು 9448109755 /8660271641 ಸಂಪರ್ಕಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.