ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಲ್ಲಿಸಿದ್ದ ಆಂಬುಲೆನ್ಸ್ ವಾಹನದ ಗಾಜು ಒಡೆದು ವೈದ್ಯಕೀಯ ಉಪಕರಣಗಳನ್ನು ಕಳವು ಮಾಡಲಾಗಿದ್ದು, ಈ ಕುರಿತು ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಫೆ. 13ರಂದು ರಾತ್ರಿ 12 ಗಂಟೆಯಿಂದ ಮರುದಿನ ಮಧ್ಯಾಹ್ನ 1 ಗಂಟೆ ನಡುವಿನ ಅವಧಿಯಲ್ಲಿ ನಡೆದಿರುವ ಕಳವು ಸಂಬಂಧ, ಶುಶ್ರೂಷಕರಾದ ದಾದಾಪೀರ ಹುಸೇನಸಾಬ್ ದಿವಾನಜ್ಜವರ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆಸ್ಪತ್ರೆಯ ಸಮೀಪದಲ್ಲಿಯೇ ನಿಲ್ಲಿಸಲಾಗಿದ್ದ ಆಂಬುಲೆನ್ಸ್ ಗಾಜು ಒಡೆಯಲಾಗಿದೆ. ₹35 ಸಾವಿರ ಮೌಲ್ಯದ ಪಲ್ಸ್ ಮಾನಿಟರ್, ₹50 ಸಾವಿರ ಮೌಲ್ಯದ ವೆಂಟಿಲೇಟರ್, ₹15 ಸಾವಿರ ಮೌಲ್ಯದ ಸಿರಿಂಜ್ ಪಂಪ್ ಉಪಕರಣಗಳನ್ನು ಕಳವು ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.