ADVERTISEMENT

ನಾಗಲಾಪುರ: ಕೋವಿಡ್ ಪರೀಕ್ಷೆಗೆ ಜನರ ಅಸಹಕಾರ, ಕಂಟೈನ್ಮೆಂಟ್‌ ವಲಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 6:17 IST
Last Updated 5 ಜೂನ್ 2021, 6:17 IST
ಬ್ಯಾಡಗಿ ತಾಲ್ಲೂಕು ನಾಗಲಾಪುರ ಗ್ರಾಮವನ್ನು ಕಂಟೈನ್ಮೆಂಟ್‌ ವಲಯವೆಂದು ಘೋಷಿಸಿ ರಸ್ತೆ ಬಂದ್ ಮಾಡಲಾಯಿತು
ಬ್ಯಾಡಗಿ ತಾಲ್ಲೂಕು ನಾಗಲಾಪುರ ಗ್ರಾಮವನ್ನು ಕಂಟೈನ್ಮೆಂಟ್‌ ವಲಯವೆಂದು ಘೋಷಿಸಿ ರಸ್ತೆ ಬಂದ್ ಮಾಡಲಾಯಿತು   

ಬ್ಯಾಡಗಿ: ತಾಲ್ಲೂಕಿನ ನಾಗಲಾಪುರ ಗ್ರಾಮವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಂಟೈನ್ಮೆಂಟ್‌ ವಲಯವೆಂದು ಘೋಷಿಸಿ, ಸಂಪರ್ಕ ರಸ್ತೆಗಳನ್ನು ಬಂದ್‌ ಮಾಡಲಾಗಿದೆ ಎಂದು ಗ್ರೇಡ್‌ 2 ತಹಶೀಲ್ದಾರ್ ಗವಿಸಿದ್ಧಪ್ಪ ದ್ಯಾವಣ್ಣನವರ ಹೇಳಿದರು.

ಗ್ರಾಮದಲ್ಲಿ ಶುಕ್ರವಾರ ಕೋವಿಡ್‌ ತಪಾಸಣಾ ತಂಡ ತೆರಳಿದ್ದು, ಆರೋಗ್ಯ, ಕಂದಾಯ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ಮನೆಗೆ ಮನೆಗೆ ತೆರಳಿ ಕೋವಿಡ್‌ ತಪಾಸಣೆ ಮಾಡಿಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಯಾರೂ ತಪಾಸಣೆಗೆ ಒಳಗಾಗಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಗ್ರಾಮವನ್ನು ಕಂಟೈನ್ಮೆಂಟ್‌ ವಲಯವೆಂದು ಘೋಷಿಸಿ ಜನರು ಗ್ರಾಮವನ್ನು ತೊರೆಯದಂತೆ ಹಾಗೂ ಗ್ರಾಮಕ್ಕೆ ಬರುವುದನ್ನು ಸ್ಥಗಿತಗೊಳಿಸಲಾಗಿದೆ.

ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಸಿಪಿಐ ಬಸವರಾಜ ಪಿ.ಎಸ್‌ ಅವರ ಸಮ್ಮುಖದಲ್ಲಿ ಒಂದು ವಾರದ ವರೆಗೆ ಬಂದ್‌ ಮಾಡಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.