ADVERTISEMENT

ನಮ್ಮೂರ ಜಾತ್ರೆ ಜ.24ರಂದು

ಕೋವಿಡ್‌ ಹಿನ್ನೆಲೆ: ಮೆರವಣಿಗೆ ರದ್ದು

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 13:31 IST
Last Updated 6 ಜನವರಿ 2021, 13:31 IST
ಹಾವೇರಿ ನಗರದಲ್ಲಿರುವ ಹುಕ್ಕೇರಿಮಠವು ‘ನಮ್ಮೂರ ಜಾತ್ರೆ’ ಸಂದರ್ಭ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು (ಸಂಗ್ರಹ ಚಿತ್ರ)
ಹಾವೇರಿ ನಗರದಲ್ಲಿರುವ ಹುಕ್ಕೇರಿಮಠವು ‘ನಮ್ಮೂರ ಜಾತ್ರೆ’ ಸಂದರ್ಭ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು (ಸಂಗ್ರಹ ಚಿತ್ರ)   

ಹಾವೇರಿ: ‘ಮರಿಕಲ್ಯಾಣ’ ಖ್ಯಾತಿಯ ನಗರದ ಹುಕ್ಕೇರಿಮಠದ ‘ನಮ್ಮೂರ ಜಾತ್ರೆ’ಯು ಶಿವಬಸವ ಶಿವಯೋಗಿಗಳ 75ನೇ ಹಾಗೂ ಶಿವಲಿಂಗ ಶಿವಯೋಗಿಗಳ 12ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜ.24ರಂದು ನಡೆಯಲಿದೆ.

ಕೋವಿಡ್‌ ನಿಯಮ ಮಾರ್ಗಸೂಚಿಯಂತೆ ಸರಳವಾಗಿ ಹುಕ್ಕೇರಿಮಠದ ಆವರಣದಲ್ಲಿ ಆಚರಿಸಲಾಗುವುದು. ನಗರದಾದ್ಯಂತ ಜರುಗುವ ಪೂಜ್ಯದ್ವಯರ ಭಾವಚಿತ್ರದ ಮೆರವಣಿಗೆಯನ್ನು ರದ್ದುಪಡಿಸಲಾಗಿದೆ.

ಶಿವಬಸವ ಶಿವಯೋಗಿಗಳ 75ನೇ ಪುಣ್ಯಸ್ಮರಣೆಯ ಶುಭ ನೆನಪಿಗೆ ಪೂಜ್ಯರ ಜನ್ಮಸ್ಥಳ ಅಥಣಿ ತಾಲ್ಲೂಕಿನ ಸಪ್ತಸಾಗರದಿಂದ ‘ಶಿವಬಸವ ಜ್ಯೋತಿ’ಯನ್ನು ಜ.22ರಂದು ತರಲಾಗುವುದು. ಶ್ರೀಮಠದಲ್ಲಿ ಉಭಯ ಪೂಜ್ಯರ ಗದ್ದುಗೆ ದರ್ಶನ ಹಾಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

ADVERTISEMENT

ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು ಎಂದು ಶ್ರೀಮಠ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.