ADVERTISEMENT

ಬಾಲ ಮಂದಿರದಲ್ಲಿದ್ದ ಗರ್ಭಿಣಿ ಬಾಲಕಿ ಗೋಡೆ ಹಾರಿ ಪರಾರಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 0:30 IST
Last Updated 7 ಜುಲೈ 2025, 0:30 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿದ್ದ 17 ವರ್ಷದ ಬಾಲಕಿ ಶನಿವಾರ ಪರಾರಿಯಾಗಿದ್ದು, ಆಕೆಗಾಗಿ ರಾಣೆಬೆನ್ನೂರು ಶಹರ ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ.

ADVERTISEMENT

‘ಅಪಹರಣಗೊಂಡಿದ್ದ ಬ್ಯಾಡಗಿಯ ಬಾಲಕಿಯನ್ನು ಸಖಿ ಒನ್‌ ಸ್ಟಾಪ್ ಕೇಂದ್ರದ ಸಿಬ್ಬಂದಿ ರಕ್ಷಿಸಿದ್ದರು. ವಿಚಾರಣೆ ವೇಳೆ ಗರ್ಭಿಣಿಯೆಂದು ಗೊತ್ತಾದ ಕಾರಣ ಆಕೆಯನ್ನು ಬಾಲಮಂದಿರದಲ್ಲಿ ಇರಿಸಲಾಗಿತ್ತು. ಬಾಲಮಂದಿರದ ಪರಿವೀಕ್ಷಣಾ ಅಧಿಕಾರಿ ಜ್ಯೋತಿ ಶಿಗ್ಲಿ ದೂರು ನೀಡಿದ್ದು, ತನಿಖೆ ನಡೆಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಾಲಮಂದಿರದಲ್ಲಿನ ಶೌಚಾಲಯಕ್ಕೆ ಹೋಗಿದ್ದ ವೇಳೆ ಬಾಲಕಿಯು ಸಮೀಪದ ಗೋಡೆಯನ್ನು ಹಾರಿ, ಪರಾರಿಯಾಗಿರುವ ಸಾಧ್ಯತೆಯಿದೆ. ಅಪಹರಣದ ಬಗ್ಗೆಯೂ ಶಂಕೆಯಿದೆ’ ಎಂದು ಅವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.