ADVERTISEMENT

ರಾಣೆಬೆನ್ನೂರು | ಮಳೆ: ಕೃಷಿಗೆ ಮುಂದಾದ ರೈತರು

​ಪ್ರಜಾವಾಣಿ ವಾರ್ತೆ
Published 16 ಮೇ 2024, 14:27 IST
Last Updated 16 ಮೇ 2024, 14:27 IST
ರಾಣೆಬೆನ್ನೂರಿನಲ್ಲಿ ಗುರುವಾರ ಮಳೆ ಸುರಿಯಿತು
ರಾಣೆಬೆನ್ನೂರಿನಲ್ಲಿ ಗುರುವಾರ ಮಳೆ ಸುರಿಯಿತು   

ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಗುರುವಾರ ಸಂಜೆ ಗುಡುಗು, ಮಿಂಚು ಸಹಿತ ಉತ್ತಮ ಮಳೆ ಸುರಿಯಿತು. ಬಿಸಿಲಿನ ತಾಪದಿಂದ ಬಸವಳಿದ ಜನತೆಗೆ ತಂಪೆರೆದಂತಾಯಿತು.

ತಾಲ್ಲೂಕಿನ ಕುಪ್ಪೇಲೂರು, ರಾಣೆಬೆನ್ನೂರು ಮತ್ತು ಮೇಡ್ಲೇರಿ ಸೇರಿದಂತೆ ಮೂರೂ ಹೋಬಳಿಗಳಲ್ಲಿ ಮಳೆ ಬಂದಿದೆ. ವರುಣನ ಆಗಮನದಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.

‘ಕುಪ್ಪೇಲೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಒಂದು ತಾಸಿಗೂ ಹೆಚ್ಚು ಮಳೆ ಆಗಿದ್ದು, ಕೃಷಿ ಚಟುವಟಿಕೆಗಳಿಗೆ ರೈತರು ಮುಂದಾಗಲಿದ್ದಾರೆ’ ಎಂದು ರೈತ ಮುಖಂಡ ಕರಬಸಪ್ಪ ಅಗಸೀಬಾಗಿಲ ತಿಳಿಸಿದರು.

ADVERTISEMENT

ಮುಂಗಾರು ಹಂಗಾಮಿಗೆ ರೈತರು ಹೊಲ ಉಳುಮೆ ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದು, ಉತ್ತಮ ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ.

ಪಟ್ಟಣದಲ್ಲಿ ಎರಡು ತಾಸಿಗೂ ಹೆಚ್ಚು ಮಳೆಯಾಗಿದ್ದರಿಂದ ಚರಂಡಿಗಳು ತುಂಬಿ ಹರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.