
ರಾಣೆಬೆನ್ನೂರು: ಹಾನಗಲ್ ಕುಮಾರ ಶಿವಯೋಗಿಗಳು ಸಮಾಜ ಸುಧಾರಣೆಗೆ ಉತ್ತಮ ವಟುಗಳನ್ನು ನಿರ್ಮಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರು ಮಹಾನ್ ಸಿದ್ದಪುರುಷರು, ದೂರದೃಷ್ಠಿಯುಳ್ಳ ದಾರ್ಶನಿಕರು’ ಎಂದು ನಿವೃತ್ತ ಪ್ರೊ. ಜಿ.ವಿ. ಕೋರಿ ಹೇಳಿದರು.
ಇಲ್ಲಿನ ಗೌರಿಶಂಕರ ನಗರ ನಿವೃತ್ತ ನೌಕರರ ಸಭಾಭವನದಲ್ಲಿ ಈಚೆಗೆ ಕದಳಿ ವೇದಿಕೆ ತಾಲ್ಲೂಕು ಘಟಕ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಹಾನಗಲ್ ಕುಮಾರ ಸ್ವಾಮೀಜಿ ಅವರ ಜಯಂತಿ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕದಳಿ ವೇದಿಕೆ ತಾಲ್ಲೂಕು ಅಧ್ಯಕ್ಷೆ ಗಾಯತ್ರಮ್ಮ ಕುರುವತ್ತಿ, ಎನ್.ಎಸ್. ಪಾಟೀಲ, ವಾಸಪ್ಪ ಕುಸಗೂರ, ಕದಳಿವೇದಿಕೆ ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ಬೆನಕಣ್ಣನವರ, ಎಸ್.ಕೆ. ನೇಶ್ವಿ, ಎಸ್.ಎಚ್. ಪಾಟೀಲ ಹಾಗೂ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.