
ರಾಣೆಬೆನ್ನೂರು: ಭಾಷೆಗಳು ಅನುವಂಶಿಕವಾಗಿವೆ. ಅವಕಾಶಗಳು ದೊರೆತಾಗ ಮಾತ್ರ ಅವು ಪ್ರಕಟಗೊಳ್ಳುತ್ತವೆ. ಭಾಷೆಗಳು ಸಂವಹನಕ್ಕೆ ಸಹಕಾರಿಯಾಗಿವೆ. ಮಾನವರ ಉಗಮದಿಂದ ಭಾಷೆಯ ಜ್ಞಾನವಿದ್ದು, ಆಂಗಿಕ ಭಾಷೆಯು ಕೂಡಾ ಭಾಷೆಯ ಸ್ವರೂಪವಾಗಿದೆ. ನಿರಂತರ ಅಧ್ಯಯನದಿಂದ ಪರಿಣಾಮಕಾರಿಯಾಗಿ ಪಾಠ ಬೋಧನೆ ಸಾಧ್ಯ ಎಂದು ಜಾನಪದ ವಿದ್ವಾಂಸ ಶಂಭು ಬಳಿಗಾರ ಹೇಳಿದರು.
ನಗರದ ಹಲಗೇರಿ ರಸ್ತೆಯ ಬಿ.ಎ.ಜೆ.ಎಸ್.ಎಸ್ ಮಹಿಳಾ ಪದವಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ತಾಲ್ಲೂಕು ಪ್ರೌಢಶಾಲಾ ಪ್ರಥಮ ಭಾಷೆ ಕನ್ನಡ ಶಿಕ್ಷಕರ ವೇದಿಕೆ ಹಾಗೂ ಬಿಎಜೆಎಸ್‌ಎಸ್ ಮಹಿಳಾ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ ಆಶ್ರಯದಲ್ಲಿ ಏರ್ಪಡಿಸಿದ ಕನ್ನಡ ಪಠ್ಯ ಬೋಧನೆ ಭಾಷಾ ಸ್ವರೂಪಗಳು ಎಂಬ ವಿಷಯ ಕುರಿತು ಏರ್ಪಡಿಸಿದ
ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಬಿ. ರಾಮಚಂದ್ರಪ್ಪ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಚೀನ ಇತಿಹಾಸ ಹೊಂದಿದ ಕನ್ನಡ ಭಾಷೆಯ ಅಭಿವೃದ್ಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿವಿಧ ಯೋಜನೆ, ಕಾರ್ಯಾಗಾರ ಕಾರ್ಯಕ್ರಮ ನಡೆಸುತ್ತಿರುವಾಗಿ ತಿಳಿಸಿದರು.
ಬಿ.ಎ.ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಆರ್.ಎಂ. ಕುಬೇರಪ್ಪ ಅವರು ಮಾತನಾಡಿ, ಕನ್ನಡ ಭಾಷೆಯ ಬೋಧನೆಗೆ ಆಳವಾದ ಅಧ್ಯಯನದ ಅಗತ್ಯವಿರುವುದಾಗಿ ವಿವರಿಸಿ, ಶಿಕ್ಷಕರು ಇತ್ತೀಚೆಗೆ ವಿಮರ್ಶಾ ಕೃತಿಗಳ ಅಧ್ಯಯನ ಕಡಿಮೆ ಮಾಡಿದ್ದಾರೆ ಎಂದು ತಿಳಿಸಿದರು.
ಕನ್ನಡ ಪಠ್ಯ ಬೋಧನೆ, ವರ್ತಮಾನ ತಲ್ಲಣ, ಕನ್ನಡ ಪಠ್ಯ ಬೋಧನೆ ಸ್ವರೂಪ ಮತ್ತು ಪರೀಕ್ಷಾ ಸುಧಾರಣೆಯ ಪರಿಕಲ್ಪನೆ ಕುರಿತು ದಾದಾಪೀರ ನವಲೆಹಾಳ, ನಂದಾ ಪೂಜಾರ ಯಲ್ಲಪ್ಪ ಮಳಲಿ ಅವರು ಗೋಷ್ಠಿಗಳಲ್ಲಿ ಉಪನ್ಯಾಸ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಎಸ್.ಕೆಂಚನಗೌಡ್ರ, ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ, ಪ್ರೊ. ಪಿ.ಟಿ. ಲಕ್ಕಣ್ಣನವರ, ಕೆ.ಎನ್. ಕಾಟೇನಹಳ್ಳಿ, ಹೊನ್ನಪ್ಪ ಹೊನ್ನಮ್ಮನವರ, ಪುಷ್ಪಾ ಶಲವಡಿಮಠ, ರಾಜೀವ ಎಂ. ಪ್ರಾಚಾರ್ಯ ಸುರೇಶ ಬಣಕಾರ, ದೇವರಾಜ ಹಂಚಿನಮನಿ, ಹನುಮಂತಪ್ಪ ಬ್ಯಾಡಗಿ, ಚಂದ್ರಶೇಖರ ಎಂ. ಕೆ, ಚಾಮರಾಜ ಕಮ್ಮಾರ, ಕುಮಾರ ಮಡಿವಾಳರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.