ADVERTISEMENT

ಮಾಲತೇಶ ಕಾರ್ಣಿಕೋತ್ಸವ: ಯುವಕನಿಗೆ ಸಿಎಂ ಸ್ಥಾನ; ಕಾರ್ಣಿಕ ನುಡಿದ ಭವಿಷ್ಯವೇನು?

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 16:08 IST
Last Updated 4 ಅಕ್ಟೋಬರ್ 2022, 16:08 IST
   

ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದಲ್ಲಿ ಮಂಗಳವಾರ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಬಿಲ್ಲನ್ನೇರಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿದರು.

ದಸರಾ ಹಬ್ಬದ ಸಮಯದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ವರ್ಷದ ಭವಿಷ್ಯವಾಣಿ ಅಂತಲೇ ನಂಬಲಾಗುವ ನುಡಿಮುತ್ತುಗಳು ಇವಾಗಿವೆ.

'ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್' ಎನ್ನುತ್ತಾ ಗೊರವಪ್ಪ ನಾಗಪ್ಪ ಉರ್ಮಿ ಅವರು ಭವಿಷ್ಯ ನುಡಿದರು.

ADVERTISEMENT

ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಮಾಲತೇಶ ಭಟ್ ಅವರು 'ಸಣ್ಣಸಣ್ಣ ರೈತರಿಗೂ ಉತ್ತಮವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ' ಅಂತ ಕಾರ್ಣಿಕ ವಿಶ್ಲೇಷಿಸಿದ್ದಾರೆ.

ದೇವರಗುಡ್ಡದ ಗೊರವಯ್ಯ ಅವರು ನುಡಿಯುವ ಕಾರ್ಣಿಕದ ಮೇಲೆ ಜನರಿಗೆ ಮೊದಲಿಂದಲೂ ಅಪಾರ ನಂಬಿಕೆಯಿದೆ. ಕೊರೊನಾ ಹಾವಳಿಯಿಂದಾಗಿ ಕಳೆದೆರಡು ವರ್ಷಗಳಿಂದ ಜಿಲ್ಲಾಡಳಿತದ ಕಟ್ಟುನಿಟ್ಟಿನ ನಿಯಮದಿಂದಾಗಿ ಕಾರ್ಣಿಕ ವೀಕ್ಷಿಸಲು ಹೆಚ್ಚು ಜನರು ಸೇರುತ್ತಿರಲಿಲ್ಲ. ಆದರೆ ಈ ಬಾರಿ ಅಪಾರಜನರುಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.