ADVERTISEMENT

ರಾಣೆಬೆನ್ನೂರು| ಪೂಜೆ ಮಾಡುವ ಕೈಗಿಂತ ಶ್ರಮಪಡುವ ಕೈ ಶ್ರೇಷ್ಠ: ಪ್ರೊ.‌ಶಿವಲಿಂಗಪ್ಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 4:18 IST
Last Updated 25 ಜನವರಿ 2026, 4:18 IST
ರಾಣೆಬೆನ್ನೂರಿನ ಎನ್‌.ಆರ್‌.ಸಂಕೇತ ಶಾಲೆಯ ಸಂಕೇತ್ ಸಂಭ್ರಮ ಹಾಗೂ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಪ್ರೊ.ಎಸ್‌.ಎನ್.‌ಶಿವಲಿಂಗಪ್ಪ ಉದ್ಘಾಟಿಸಿದರು
ರಾಣೆಬೆನ್ನೂರಿನ ಎನ್‌.ಆರ್‌.ಸಂಕೇತ ಶಾಲೆಯ ಸಂಕೇತ್ ಸಂಭ್ರಮ ಹಾಗೂ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಪ್ರೊ.ಎಸ್‌.ಎನ್.‌ಶಿವಲಿಂಗಪ್ಪ ಉದ್ಘಾಟಿಸಿದರು   

ರಾಣೆಬೆನ್ನೂರು: ಪೂಜೆ, ಪುನಸ್ಕಾರ, ನಮಸ್ಕಾರಗಳಿಗಿಂತಲೂ ಯಾವುದೇ ಕ್ಷೇತ್ರದಲ್ಲಿ ಶ್ರಮಪಟ್ಟು ಮಾಡುವ ಕೆಲಸವು ಶ್ರೇಷ್ಠವಾದದ್ದು ಎಂದು ಸಂಕೇತ್ ಸಂಭ್ರಮ ಹಾಗೂ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಪ್ರೊ.ಎಸ್‌.ಎನ್.‌ಶಿವಲಿಂಗಪ್ಪ ಹೇಳಿದರು.

ನಗರದ ಹಳೇ ಪಿ.ಬಿ.ರಸ್ತೆ ಬಳಿ ಇರುವ ಎನ್.ಆರ್. ಸಂಕೇತ್ ಶಾಲೆಯ ಸಭಾಂಗಣದಲ್ಲಿ ಈಚೆಗೆ ನಡೆದ ಸಂಕೇತ್ ಸಂಭ್ರಮ, ಪ್ರತಿಭಾ ಸಂಕೇತ್ ಕವನ ಸಂಕಲನ ಬಿಡುಗಡೆ ಹಾಗೂ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಜಿ.ಎಚ್‌. ಉಮಾಕಾಂತ ಅವರು ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಹಾಗೂ ಸಂಸ್ಥೆಯ ಅಧ್ಯಕ್ಷ ಪ್ರೊ.ಎನ್ ಕೆ ರಾಮಚಂದ್ರಪ್ಪಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಕೆ.ಪಿ ಮುದಿಗೌಡರ್, ಮುಖ್ಯ ಶಿಕ್ಷಕ ಡಿ.ಕೆ.ಆಂಜನೇಯ, ಸೈಯದ್ ಮಾಗೋಡ, ಅನಿಲ್ ಕುಮಾರ, ವಿಜಯಕುಮಾರ, ಅನಸೂಯಾ, ಜ್ಯೋತಿ, ಸೌಂದರ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.