ADVERTISEMENT

₹12 ಸಾವಿರ ಲಂಚಕ್ಕೆ ಬೇಡಿಕೆ: ರಾಣೆಬೆನ್ನೂರು ತಹಶೀಲ್ದಾರ್‌ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 11:31 IST
Last Updated 5 ಜನವರಿ 2024, 11:31 IST
<div class="paragraphs"><p>ಹನುಮಂತ ಶಿರಹಟ್ಟಿ, </p></div>

ಹನುಮಂತ ಶಿರಹಟ್ಟಿ,

   

ಹಾವೇರಿ: ಅಕ್ರಮ ಸಾಗಣೆ ಮಾಡುತ್ತಿದ್ದ ಮರಳು ತುಂಬಿದ ಎರಡು ಲಾರಿಗಳನ್ನು ಬಿಡಲು ₹12 ಸಾವಿರ ಲಂಚ ಪಡೆಯುವ ವೇಳೆ ರಾಣೆಬೆನ್ನೂರಿನ ತಹಶೀಲ್ದಾರ್‌ ಮತ್ತು ಚಾಲಕ ಈ ಇಬ್ಬರೂ ಶುಕ್ರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.  

ತಹಶೀಲ್ದಾರ್‌ ಹನುಮಂತ ಶಿರಹಟ್ಟಿ (ಎಚ್‌.ಎನ್‌.ಶಿರಹಟ್ಟಿ) ಮತ್ತು ಜೀಪ್‌ ಚಾಲಕ ಮಾಲತೇಶ ಮಡಿವಾಳರ ಸಿಕ್ಕಿಬಿದ್ದ ಆರೋಪಿಗಳು. 

ADVERTISEMENT

ಜೀಪ್‌ ಚಾಲಕ ಲಂಚ ಪಡೆದುಕೊಂಡು, ರಾಣೆಬೆನ್ನೂರು ನಗರದ ವೀರಭದ್ರೇಶ್ವರ ಬಡಾವಣೆಯಲ್ಲಿರುವ ತಹಶೀಲ್ದಾರ್‌ ಮನೆಯಲ್ಲಿ ಹನುಮಂತ ಶಿರಹಟ್ಟಿ ಅವರಿಗೆ ಕೊಡುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. 

ರಾಣೆಬೆನ್ನೂರಿನ ಮಂಜುನಾಥ ವಾಲೀಕಾರ ಅವರಿಗೆ ಸೇರಿದ ಎರಡು ಲಾರಿಗಳು ಅಕ್ರಮ ಮರಳು ಸಾಗಣೆ ಮಾಡುತ್ತಿವೆ ಎಂಬ ಆರೋಪದ ಮೇರೆಗೆ ಈಚೆಗೆ ವಶಕ್ಕೆ ಪಡೆಯಲಾಗಿತ್ತು. ಎರಡು ಲಾರಿಗಳ ಬಿಡುಗಡೆಗೆ ತಹಶೀಲ್ದಾರ್‌ ಅವರು ₹12 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್‌ ನೇತೃತ್ವದಲ್ಲಿ ಹಾವೇರಿ ಲೋಕಾಯುಕ್ತ ಪೊಲೀಸ್‌ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.