ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಒಟ್ಟಿಗೆ ತಮ್ಮ ಬೆಂಬಲಿಗರ ಜೊತೆ ವಿಜಯೋತ್ಸವ ಆಚರಿಸಿದರು
ರಟ್ಟೀಹಳ್ಳಿ: ಇಲ್ಲಿಯ ಪಟ್ಟಣ ಪಂಚಾ ಯಿತಿಯ 15 ವಾರ್ಡ್‌ಗಳ ಸದಸ್ಯರ ಆಯ್ಕೆಗೆ ಇತ್ತೀಚೆಗೆ ನಡೆದಿದ್ದ ಚುನಾ ವಣೆಯ ಫಲಿತಾಂಶ ಬುಧವಾರ ಹೊರ ಬಿದ್ದಿದೆ. ಕಾಂಗ್ರೆಸ್–7 ಹಾಗೂ ಬಿಜೆಪಿ–6 ಸ್ಥಾನಗಳಲ್ಲಿ ವಿಜಯಶಾಲಿ ಯಾಗಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಇಬ್ಬರು ಪಕ್ಷೇತರರು ನಿರ್ಣಾಯಕ ಸ್ಥಾನ ದಲ್ಲಿದ್ದಾರೆ. ಪಟ್ಟಣ ಪಂಚಾಯಿತಿ ರಚನೆ ಯಾದ ಬಳಿಕ ಇದೇ ಮೊದಲ ಬಾರಿಗೆ ಚುನಾ ವಣೆ ನಡೆದಿತ್ತು. ಆ. 17ರಂದು ಶೇ. 80.63ರಷ್ಟು ಮತದಾನವಾಗಿತ್ತು. ನಿಗದಿಯಂತೆ ಬುಧವಾರ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಹೀಗಾಗಿ, ರಟ್ಟೀಹಳ್ಳಿ ಪಟ್ಟಣ ಪಂಚಾ ಯಿತಿಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಬಿರುಸಿನ ಪ್ರಚಾರ ನಡೆಸಿತ್ತು. ಸ್ಥಳೀಯ ಶಾಸಕ ಯು.ಬಿ. ಬಣಕಾರ ಸಹ ಚುನಾವಣೆಯಲ್ಲಿ ಗೆಲ್ಲಲು ತಂತ್ರಗಳನ್ನು ರೂಪಿಸಿದ್ದರು.
ಬಿಜೆಪಿ ಮುಖಂಡರೂ ಆಗಿರುವ ಮಾಜಿ ಸಚಿವ ಬಿ.ಸಿ.ಪಾಟೀಲ ಕ್ಷೇತ್ರವಾಗಿದ್ದರಿಂದ, ಅವರು ಸಹ ಚುನಾವಣೆಯ ಅಖಾಡಕ್ಕೆ ಧುಮ್ಮಿಕ್ಕಿದ್ದರು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಅವರ ಗೆಲುವಿಗೆ ಬಿರುಸಿನ ಪ್ರಚಾರ ನಡೆಸಿದ್ದರು.
ಸ್ಥಳೀಯ ಚುನಾವಣೆ ಆಗಿದ್ದರಿಂದ ರಾಷ್ಟ್ರೀಯ ಪಕ್ಷದ ಜೊತೆಯಲ್ಲಿ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಸಹ ಇರಬೇಕಾಗುತ್ತದೆ. ಅದೇ ಕಾರಣಕ್ಕೆ, ಕೆಲವೇ ಮತಗಳ ಅಂತರದಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ಸೋಲು ಅನುಭವಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳು ಗೆಲುವು ಸಾಧಿಸಬಹುದೆಂದು ಪಕ್ಷದ ಮುಖಂಡರು ಅಂದುಕೊಂಡಿದ್ದರು. ಆದರೆ, ಅವರ ಲೆಕ್ಕಚಾರ ತಪ್ಪಿದೆ. ಏಳು ಅಭ್ಯರ್ಥಿಗಳು ಮಾತ್ರ ಗೆದ್ದಿದ್ದಾರೆ.
ರಟ್ಟೀಹಳ್ಳಿ ಗ್ರಾಮ ಪಂಚಾಯಿತಿ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು, ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದೇ ಕಾರಣಕ್ಕೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಗೆಲ್ಲಬಹುದೆಂದು ಮುಖಂಡರು ತಿಳಿದಿದ್ದರು. ಆದರೆ, ಬಿಜೆಪಿ 6 ಅಭ್ಯರ್ಥಿ ಗಳು ಮಾತ್ರ ವಿಜಯಶಾಲಿಯಾಗಿದ್ದಾರೆ.
ವಾರ್ಡ್ 9ರಲ್ಲಿ ಶಿವಕುಮಾರ ಉಪ್ಪಾರ ಹಾಗೂ ವಾರ್ಡ್ 15ರಲ್ಲಿ ಲಲಿತಾ ಚನ್ನಗೌಡ್ರ ಅವರು ಪಕ್ಷೇತರರಾಗಿ ವಿಜಯಶಾಲಿಯಾಗಿದ್ದಾರೆ. ಅಧಿಕಾರದ ಗದ್ದುಗೆ ಹಿಡಿಯಲು ಒಂದು ಹಾಗೂ ಎರಡು ಸ್ಥಾನಗಳ ಅವಶ್ಯಕತೆಯಿದೆ. ಹೀಗಾಗಿ, ಇಬ್ಬರೂ ಪಕ್ಷೇತರರಿಗೆ ಬೇಡಿಕೆ ಬಂದಿದೆ.
ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಡೆಯಲು ಸದಸ್ಯರ ಬಹುಮತದ ಅಗತ್ಯವಿದೆ. 15 ಸದಸ್ಯರ ಜೊತೆಯಲ್ಲಿ ಸ್ಥಳೀಯ ಶಾಸಕ ಹಾಗೂ ಸ್ಥಳೀಯ ಸಂಸದ ಸಹ ಮತದಾನ ಮಾಡಲು ಅರ್ಹತೆ ಪಡೆದಿದ್ದಾರೆ.
ಸ್ಥಳೀಯ ಶಾಸಕ ಬಣಕಾರ, ಕಾಂಗ್ರೆಸ್‌ನವರು. ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿಯವರು. ಅವರಿ ಬ್ಬರು ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ. ಈ ರೀತಿಯಾದರೆ, ಕಾಂಗ್ರೆಸ್‌ಗೆ 8 ಹಾಗೂ ಬಿಜೆಪಿಗೆ 7 ಸದಸ್ಯರ ಬೆಂಬಲ ಸಿಗಲಿದೆ. ಉಳಿದ ಇಬ್ಬರು ಪಕ್ಷೇತರರು ಯಾರ ಪರವಿದ್ದಾರೆ ಎಂಬುದೇ ನಿರ್ಣಾಯಕವಾಗಲಿದೆ.
ಪಕ್ಷೇತರರಾಗಿ ಆಯ್ಕೆಯಾಗಿರುವ ಶಿವಕುಮಾರ ಉಪ್ಪಾರ ಕಾಂಗ್ರೆಸ್ ಪರ ಒಲುವು ಹೊಂದಿರಬಹುದು. ಇನ್ನೊಬ್ಬ ಅಭ್ಯರ್ಥಿ ಲಲಿತಾ, ಸ್ವಾಭಿಮಾನದ ಮೂಲಕ ಆರಿಸಿ ಬಂದಿದ್ದಾರೆ. ಆದರೆ, ಅವರ ಕುಟುಂಬಕ್ಕೆ ಬಿಜೆಪಿಯ ಹಿನ್ನೆಲೆ ಯಿದೆ. ಹೀಗಾಗಿ, ಪಕ್ಷೇತರರು ಯಾರ ಪರ ಎಂಬುದನ್ನು ಹೇಳುವುದು ಸದ್ಯಕ್ಕೆ ಕಷ್ಟವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ, ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಯಲ್ಲಿ ಕಾಂಗ್ರೆಸ್‌ನವರು ಕುಳಿತರೆ ಪಟ್ಟಣದ ಅಭಿವೃದ್ಧಿ ಸಾಧ್ಯವೆಂದು ಪಕ್ಷದ ಸದಸ್ಯರು ಹೇಳುತ್ತಿದ್ದಾರೆ. ಪಕ್ಷೇತರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ. ಅಧ್ಯಕ್ಷ ಸ್ಥಾನದ ಮೀಸಲಾತಿ: ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗದ ‘ಅ‘ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದೆ.
ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ವಿಜೇತ ಅಭ್ಯರ್ಥಿಗಳ ಬೆಂಬಲಿಗರು, ವಿಜಯೋತ್ಸವ ಆಚರಿಸಿದರು. ಪ್ರತಿ ವಾರ್ಡ್‌ನಲ್ಲೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಪರಸ್ಪರ ಬಣ್ಣ ಎರಚಿ ಮೆರವಣಿಗೆ ನಡೆಸಲಾಯಿತು.

ಅಧಿಕಾರ ಹಿಡಿಯುವ ಗುರಿ ನಮಗಿಲ್ಲ. ಪಕ್ಷೇತರರು ಒಲವು ತೋರಿದರೆ ಮಾತ್ರ ಅಧಿಕಾರ ಪಡೆಯುತ್ತೇವೆ. ನಾವಾಗಿಯೇ ಪಕ್ಷೇತರರ ಬಳಿ ಹೋಗುವುದಿಲ್ಲ

ಯು.ಬಿ. ಬಣಕಾರ, ಹಿರೇಕೆರೂರು ಶಾಸಕ

ಸಚಿವರು–ಮುಖಂಡರು ಪ್ರಚಾರ ಮಾಡಿದರೂ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಈ ಬಾರಿ ಬಿಜೆಪಿಯೇ ಅಧಿಕಾರ ಹಿಡಿಯಲಿದೆ

ವಿರೂಪಾಕ್ಷಪ್ಪ ಬಳ್ಳಾರಿ,

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಕಾಂಗ್ರೆಸ್ 10 ಸ್ಥಾನ ಗೆಲ್ಲಬೇಕಿತ್ತು. ಕಡಿಮೆ ಮತಗಳಿಂದ ಕೆಲ ವಾರ್ಡ್‌ಗಳಲ್ಲಿ ಸೋಲಾಗಿದೆ. ಅಧಿಕಾರ ಹಿಡಿಯಲು ಪ್ರಯತ್ನ ಆರಂಭಿಸಲಾಗಿದೆ ಸಂಜೀವಕುಮಾರ ನೀರಲಗಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ಕಾಂಗ್ರೆಸ್ ಸರ್ಕಾರದ ಸಚಿವರು ಬಂದು ಪ್ರಚಾರ ಹಾಗೂ ಹಣದ ಹೊಳೆ ಹರಿಸಿದರು. ಅದಕ್ಕೆ ಬಗ್ಗದ ಜನರು, ಬಿಜೆಪಿಗೆ 6 ಸ್ಥಾನ ಕೊಟ್ಟಿದ್ದಾರೆ. ಇಬ್ಬರು ಪಕ್ಷೇತರರು ಸಹ ನಮ್ಮವರೇ

ಬಿ.ಸಿ. ಪಾಟೀಲ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.