ADVERTISEMENT

ಹಾವೇರಿ | ಕಪ್ ಗೆದ್ದ ಆರ್‌ಸಿಬಿ: ವಿದ್ಯಾರ್ಥಿಗಳಿಗೆ ಹೋಳಿಗೆ ಊಟ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 9:20 IST
Last Updated 4 ಜೂನ್ 2025, 9:20 IST
   

ಹಾವೇರಿ: ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ನಗರದ ಭಗತ್ ಸಿಂಗ್ ಪಿಯು ಕಾಲೇಜಿನಲ್ಲಿ ಗೆಲುವಿನ ಸಂಭ್ರಮ ಆಚರಿಸಲಾಯಿತು.

ಕಾಲೇಜಿನಲ್ಲಿ ಕೇಕ್ ಕತ್ತರಿಸಿದ ವಿದ್ಯಾರ್ಥಿಗಳು, ಆರ್‌ಸಿಬಿ ಪರ ಜೈಕಾರ ಕೂಗಿದರು.

ನಂತರ, ಕಾಲೇಜು ವತಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಹೋಳಿಗೆ ಹಾಗೂ ಶೀಕರಣಿ (ಮಾವಿನ ಆಹಾರ) ಊಟ ಮಾಡಿಸಲಾಯಿತು.

ADVERTISEMENT

18 ವರ್ಷಗಳ ನಂತರ ಆರ್‌ಸಿಬಿ ಕಪ್ ಗೆದ್ದಿದ್ದು, ಅದರ ಪ್ರಯುಕ್ತ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.