ಗುತ್ತಲ: ಸಾವಿರಾರು ಜನ ರೈತರಿಗೆ ಉಪಯೋಗವಾಗಬೇಕಿದ್ದ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಂಪೂರ್ಣ ಹಾಳು ಬಿದ್ದು ಅನೈತಿಕ ಚಟುವಟಿಕೆಯ ತಾಣವಾಗಿ ಪರಿಣಮಿಸಿದೆ.
15.7 ಎಕರೆ ಪ್ರದೇಶದಲ್ಲಿ ಇರುವ ವಿಶಾಲವಾದ ಕೃಷಿ ಉತ್ಪನ್ನ ಮಾರುಕಟ್ಟೆ ಮದ್ಯವೆಸನಿಗಳ ತಾಣವಾಗಿದೆ ರಾತ್ರಿಯಾದರೆ ಸಾಕು ಮದ್ಯವೆಸನಿಗಳು ಮದ್ಯಸೇವಿಸಿ ಬಾಟಲಿಗಳನ್ನು ಒಡೆದು ಬಿಸಡುವದು ಕಂಡು ಬಂದಿದೆ.ಮುಳ್ಳಿನ ಗಿಡ ಕಸಕಡಿ ಮತ್ತು ಬಾರಿ ಪ್ರಮಾಣದ ಹುಲ್ಲು ಬೆಳೆದಿರುವದರಿಂದ ಪಟ್ಟಣದ ಜಾನುವಾರುಗಳು ಅಲ್ಲಿಯೇ ಮೈಯಲು ಬಿಡುತ್ತಾರೆ.ಮಾರುಕಟ್ಟೆಯ ಆವರಣದಲ್ಲಿ ಬಾರಿ ಪ್ರಮಾಣದಲ್ಲಿ ಗಿಡಗಳು ಬೆಳೆದಿರುವದರಿಂದ ವಿಷಜಂತುಗಳ ತಾಣವಾಗಿದೆ.
ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೊಡ್ಡ ದೊಡ್ಡ ಗೋದಾಮುಗಳನ್ನು ಕಟ್ಟಿದ್ದಾರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ವಹಣೆ ಕೊರೆತೆಯಿಂದ ಗೋದಾಮುಗಳು ಹಾಳು ಬಿದ್ದಿ ಮಳೆಗಾಲದಲ್ಲಿ ಕುರಿ ಹಿಂಡುಗಳು ನಿಲ್ಲಲ್ಲು ಅನುಕೂಲಕರವಾಗಿ ಮಾಡಿದ್ದಾರೆ.
ಗೋದಾಮು ಮತ್ತು ವ್ಯಾಪಾರಸ್ಥರಿಗೆ ನಿರ್ಮಿಸಿರುವ ಕಟ್ಟಡಗಳ ಸುತ್ತ ಬಾರಿ ಪ್ರಮಾಣದ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ ಕಟ್ಟಡದ ಒಳಗೆ ಮತ್ತು ಹೊರಗೆ ಹೊಗಲು ಬಾರದಂತೆ ಬೆಳೆದಿರುವದರಿಂದ ಮಾರುಕಟ್ಟೆಗೆ ಹೊಗಲು ಜನರು ಹಿಂದೇಟು ಹಾಕುತ್ತಿದ್ದಾರೆ.
40 ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಹೊಂದಿರುವ ಪಟ್ಟಣದಲ್ಲಿ ದೊಡ್ಡ ಪ್ರಮಾಣದ ಕೃಷಿ ಉತ್ಪನ್ನ ಮಾರುಕಟ್ಟೆ ಇದ್ದರು ರೈತರ ಪಾಲಿಗೆ ಇಲ್ಲದಂತಾಗಿದೆ ವ್ಯಾಪಾರಸ್ಥರು ಇಲ್ಲದ ಕಾರಣ ಮೆಕ್ಕೆಜೋಳ,ತರಕಾರಿ,ಹೈಬ್ರಿಡ್ ಜೋಳ ಕಾಳುಕಡಿಯನ್ನು ರೈತರು 30 ರಿಂದ 35 ಕಿ.ಮೀ ಹಾವೇರಿ,ರಾಣೆಬೆನ್ನೂರ ನಗರಕ್ಕೆ ಹೊಗಬೇಕಾಗುತ್ತದೆ.ಶೇಂಗಾ ಮಾರಾಟ ಮಾಡಲು ಗದಗ ನಗರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.ಪಟ್ಟಣದ ಕೃಷಿ ಮಾರುಕಟ್ಟೆ ಪ್ರಾರಂಭವಾದರೆ ಈ ಭಾಗದ ರೈತರಿಗೆ ವ್ಯಾಪಾರ ಮಾಡಲಿಕ್ಕೆ ಉತ್ತಮ ಅನುಕೂಲವಾಗುತ್ತದೆ ಎಂದು ಕನವಳ್ಳಿ ಗ್ರಾಮದ ರೈತ ಮುಖಂಡ ಮಂಜುನಾಥ ಕದಂ ಹೇಳುತ್ತಾರೆ.
ಅಗ್ನಿ ಶಾಮಕ ಠಾಣೆ ನಿರ್ಮಾಣ ಮಾಡಿ:
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಾಣ ಮಾಡಲು 1.20 ಎಕರೆ ಜಮೀನು ಇದ್ದು ಆದರೆ ಅಗ್ನಿ ಶಾಮಕ ಠಾಣೆ ಪ್ರಾರಂಭವಾಗದಿರುವದು ಈ ಭಾಗದ ರೈತರಿಗೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಬೇಸರದ ಸಂಗತಿಯಾಗಿದೆ.ಪ್ರತಿವರ್ಷ ಹಾವೇರಿ ಪೂರ್ವ ಭಾಗದ ಗ್ರಾಮಗಳಲ್ಲಿ 50 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕಬ್ಬಿನ ಗದ್ದೆಗಳು ಬೆಂಕಿಗಾಹುತಿಯಾಗುತ್ತಿವೆ.
ಹಾವೇರಿಯಿಂದ ಗುತ್ತಲ.ನೆಗಳೂರ,ಹೊಸರಿತ್ತಿ,ತೇರದಹಳ್ಳಿ ಮತ್ತು ಹಾವನೂರ ಗ್ರಾಮಗಳಿಗೆ ತೇರಳಲು 40 ಕಿ.ಮೀ ಮತ್ತು ಹಾಂವಶಿ ಮತ್ತು ಶಾಕಾರ ಗ್ರಾಮಗಳಿಗೆ ತೇರಳಲು 60 ಕಿ.ಮೀ ಹೋಗಬೇಕಾಗುತ್ತದೆ.ಅಷ್ಷರಲ್ಲಿ ಎಲ್ಲವು ಬೆಂಕಿಗಾಹುತಿಯಾಗುತ್ತವೆ ಎಂದು ಈ ಬಾಗದ ರೈತರು ಹೇಳುತ್ತಾರೆ.
ತುಂಗಭದ್ರ ಮತ್ತು ವರದಾ ನದಿ ಇರುವದು ಹಾವೇರಿ ಪೂರ್ವ ಭಾಗದ ಕಡೆ ನದಿಯಲ್ಲಿ ಪ್ರತಿವರ್ಷ 4 ರಿಂದ 5 ಜನ ಮುಳಗಿ ಸಾವನ್ನಪ್ಪುತ್ತಾರೆ. ಹಾವೇರಿಯಿಂದ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಎಲ್ಲ ಮುಗಿದೇ ಹೋಗಿರುತ್ತದೆ. ಶೀಘ್ರದಲ್ಲಿ ಗುತ್ತಲ ಪಟ್ಟಣಕ್ಕೆ ಅಗ್ನಿಶಾಮಕ ಠಾಣೆ ನಿರ್ಮಿಸಿದರೆ ಉತ್ತಮವಾಗುತ್ತದೆ ಎಂದು ಈ ಭಾಗದ ರೈತರು ಹೇಳುತ್ತಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸ್ವಚ್ಛಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆರುದ್ರಪ್ಪ ಲಮಾಣಿ, ಶಾಸಕ
ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಶೀಘ್ರದಲ್ಲಿ ಸ್ವಚ್ಚಗೊಳಿಸಲಾಗುವದು. ಸುತ್ತ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. 2 ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆಜಿ.ಬಿ.ಕಟ್ಟೇರಹಳ್ಳಿ, ಎಪಿಎಂಸಿ ಕಾರ್ಯದರ್ಶಿ
ಹಾವೇರಿ ಈ ಬಾರಿ ಕೆಎಸ್‌ಫ್‌ನಲ್ಲಿ 2025–26ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾವ ಮಾಡಲಾಗಿದೆ. ಹಣ ಮಂಜೂರಾತಿ ನೀಡಿದ ತಕ್ಷಣ ಕಟ್ಟಡ ಕಾಮಾಗಾರಿ ಪ್ರಾರಂಭಿಸಲಾಗುವದುವಿನಾಯಕ ಹಟ್ಟಿಕಾರ, ಜಿಲ್ಲಾ ಅಗ್ನಿ ಶಾಮಕದಳದ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.