ADVERTISEMENT

ಆರೋಗ್ಯವಂತ ನಾಡು ನಿರ್ಮಾಣವಾಗಲಿ: ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 2:12 IST
Last Updated 6 ಜೂನ್ 2021, 2:12 IST
ಶಿಗ್ಗಾವಿ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ಘಟಕ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಸಸಿ ನೆಡಲಾಯಿತು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ರಾಜ್ಯ ಯುವ ಮೋರ್ಚಾ ಘಟಕದ ಸದಸ್ಯ ನರಹರಿ ಕಟ್ಟಿ, ಯುವ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ರಾಯಣ್ಣವರ ಇದ್ದಾರೆ

ಶಿಗ್ಗಾವಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪರಿಸರ ನಾಶವಾಗದಂತೆ ನೋಡಿಕೊಳ್ಳುವ ಜತೆಗೆ ಆರೋಗ್ಯವಂತ ನಾಡು ನಿರ್ಮಾಣಕ್ಕೆ ಎಲ್ಲರು ಕೈಜೋಡಿಸಬೇಕಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಣ್ಯ ಸಂಪತ್ತು ನಾಶವಾದಂತೆ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿದೆ. ಗಿಡಮರಗಳು ಮನುಷ್ಯನಿಗೆ ನೀಡುವ ಆಮ್ಲಜನಕ ಕಡಿಮೆಯಾಗಿ ಇಲ್ಲದ ರೋಗರುಜಿನಗಳು ಆರಂಭವಾಗಿವೆ ಎಂದರು.

ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ, ಪಟ್ಟಣದ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ. ಸಸಿಗಳನ್ನು ನೆಡಲಾಗುತ್ತಿದೆ ಎಂದರು.

ADVERTISEMENT

ರಾಜ್ಯ ಯುವ ಮೋರ್ಚಾ ಘಟಕದ ಸದಸ್ಯ ನರಹರಿ ಕಟ್ಟಿ ಮಾತನಾಡಿದರು. ಯುವ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ರಾಯಣ್ಣವರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಕಾಶೀನಾಥ ಕಳ್ಳಿಮನಿ, ವಿನಯ ಮುಂಡಗೋಡ, ರಾಜೇಶ ದೊಡ್ಡಮನಿ, ಪ್ರತೀಕ್ ಕೋಳೆಕರ, ಚೇತನ್ ಕಲಾಲ್, ಮಂಜುನಾಥ ಮಿರ್ಜಿ, ಸಚಿನ್ ಮಡಿವಾಳರ, ರಾಘವೇಂದ್ರ ಆಟದಕರ ಸೇರಿದಂತೆ ಯುವ ಮೋರ್ಚಾ ಘಟಕದ ಎಲ್ಲ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.